ಪ್ರಿಯ ರೈತ ಬಾಂಧವರಿಗೆ ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ತಮ್ಮೆಲ್ಲರಿಗೂ ನಮಸ್ಕಾರಗಳು. ಕರ್ನಾಟಕದ ಕೆಲವು ಭಾಗದಲ್ಲಿ ಅತಿಯಾಗಿ ಮಳೆಯಾಗಿರುವ ಕಾರಣ ರೈತನು ನಷ್ಟಕ್ಕೆ ಒಳಗಾಗಿದ್ದಾನೆ, ಹೀಗಾಗಿ ರೈತನಿಗೆ ಸಹಾಯದಾನ ನೀಡಲು ಸರಕಾರವು ಬೆಳೆ ಹಾನಿ ಪರಿಹಾರವನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮೊದಲನೇ ಒಂದು ಕಂತಿನಲ್ಲಿ ರೈತರಿಗೆ ಹಣವನ್ನು ತಲುಪಿಸಿದ್ದು , ಈ ಕಂತಿನಲ್ಲಿ ಉಳಿದ ರೈತರಿಗೆ ಹಣವನ್ನು ನೀಡಲಾಗಿದೆ. ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಬೆಳೆ ಹಾನಿ ಪರಿಹಾರ ನಮ್ಮ ಖಾತೆಗೆ ಜಮಾ ಆಗಿದೆಯಾ? ಎಂಬುದನ್ನು ಹೇಗೆ ತಿಳಿಯಬೇಕು ?
ಮೊದಲಿಗೆ ನೀವು ಸರಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
https://parihara.karnataka.gov.in/service92/
ನಂತರ ನೀವು ವರ್ಷ(2023), ಋತು , ವಿಪತ್ತಿನ ಕಾರಣ , ಎಲ್ಲವನ್ನು ಆಯ್ಕೆ ಮಾಡಿಕೊಳ್ಳಬೇಕು.
ನಂತರ ಫಲಾನುಭವಿಗಳು ತಮ್ಮ ಜಿಲ್ಲೆ ತಾಲೂಕು ಗ್ರಾಮ ಹಾಗೂ ಮುಂತಾದವುಗಳನ್ನು ಕೆಳಗೆ ತೋರಿಸಿದ ಹಾಗೆ ತುಂಬಬೇಕು. ನಂತರ ನಿಮ್ಮ ಗ್ರಾಮದ ಹೆಸರನ್ನು ಆಯ್ದುಕೊಂಡು ಪೇಮೆಂಟ್ ಪೆಜ್ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು.
ಇದಾದ ನಂತರ ನಿಮಗೆ ಒಂದು ಮುಖಪುಟ ಕರೆದುಕೊಳ್ಳುತ್ತದೆ. ಇದರಲ್ಲಿ ನಿಮ್ಮ ಗ್ರಾಮದ ಎಲ್ಲ ಫಲಾನುಭವಿಗಳ ಲಿಸ್ಟ್ ತೋರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇದ್ದರೆ ನೀವು ಈ ಅರ್ಹರು ಎಂದರ್ಥ. ಒಂದು ವೇಳೆ ನಿಮ್ಮ ಹೆಸರು ಇಂಗ್ಲೀಷ್ ನಲ್ಲಿ ಇಲ್ಲದಿದ್ದರೆ ನೀವು ಇನ್ನೂ ಈ ಕೆವೈಸಿ ಮಾಡಿಸಿಲ್ಲ ಎಂದರ್ಥ.
ನಿನ್ನೆ ತಾನೆ ನನಗೆ 21000 ಹಣ ಜಮಾ ಆಗಿದ್ದು ನಿಮ್ಮ ಖಾತೆಗೂ ಆಗಿದೆಯಾ ಎಂಬುದನ್ನು ಪರಿಶೀಲನೆ ಮಾಡಿ.