ಕೃಷಿ ರೋಗ ನಿರ್ವಹಣೆ  : ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

WhatsApp Group Join Now

ಕೃಷಿ ರೋಗ ನಿರ್ವಹಣೆ

Thank you for reading this post, don't forget to subscribe!

ಎಲ್ಲ ಪ್ರಿಯ ರೈತ ಬಾಂಧವರಿಗೆ ಕೃಷಿ ವಿಚಾರ ಸಾಮಾಜಿಕ ಜಾಲತಾಣದಿಂದ ನಮಸ್ಕಾರಗಳು, ಭಾರತ ಒಂದು ಕೃಷಿ ಆಧಾರಿತ ದೇಶವಾಗಿದೆ, ದೇಶದ 1/3 ಭಾಗದ ಜನಸಂಖ್ಯೆಯು ಹಳ್ಳಿಯಲ್ಲಿ  ವಾಸಿಸುತ್ತಾರೆ, ಮತ್ತು ಇದು ಸುಮಾರು 40ರಷ್ಟು  ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸಹಾಯಮಾಡುತ್ತದೆ. ಆದರೆ ರೈತನು  ಅನೇಕ ಕಾರಣಗಳಿಂದ ಪೆಟ್ಟು ತಿನ್ನುತ್ತಲೇ ಬಂದಿದ್ದಾನೆ.

ರೈತನಿಗೆ ಹೆಚ್ಚಾಗಿ  ಆಧುನಿಕ ಯಂತ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದದೆ ಇರುವುದು , ಮಾರುಕಟ್ಟೆಯ ಮಾಹಿತಿಯನ್ನು ತಿಳಿಯದೆ ಇರುವುದು , ತನ್ನ ಹೊಲಕ್ಕೆ ಎಷ್ಟು ಪ್ರಮಾಣದ ಫರ್ಟಿಲೈಜರ್ಸ್  ಅಥವಾ ಗೊಬ್ಬರಗಳನ್ನು ಅಳವಡಿಸಬೇಕೆಂಬುದು ಮಾಹಿತಿ  ಇಲ್ಲದೇ  ಇರುವುದು, ಹೆಚ್ಚು ಇಳುವರಿ ಕೊಡುವ  ತಳಿಗಳನ್ನು ಬಳಸದೆ ಇರುವುದು , ಅತಿವೃಷ್ಟಿ ಅನಾವೃಷ್ಟಿ . ಹೀಗೆ ನಾನಾ ಕಾರಣಗಳಿಂದ ರೈತನು  ದಿನನಿತ್ಯ ಪೆಟ್ಟನ್ನು ತಿನ್ನುತ್ತ ಬಂದಿದ್ದಾನೆ.

ಇದರಲ್ಲಿ ಒಂದಾದದ್ದು  ರೋಗನಿರ್ವಹಣೆ , ಇದು ಸುಮಾರು 40 ರಿಂದ 50 ಪರ್ಸೆಂಟ್  ಬೆಳೆಗೆ ಹಾನಿ ಮಾಡುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗೂ ಹೇಗೆ ರೋಗನಿರ್ವಹಣೆಯನ್ನು ಮಾಡಬೇಕು ಎಂಬುದನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಹೌದು ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ಕೃಷಿ ಸಂಬಂಧಿಸಿದ ವಿಷಯವಾದಂತಹ , ಕೃಷಿ ರೋಗ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಮೊದಲನೆಯದಾಗಿ ಫೈರಿನ ರೋಗಗಳು ಮುಖ್ಯವಾಗಿ
1) ಫಂಗಸ್ ರೋಗ  ಅಥವಾ ಹುಳಿ ರೋಗ – ಈ ರೋಗಗಳು ಮುಖ್ಯವಾಗಿ ಕಡಲೆ, ಕಾಳು , ಜೋಳ ಹೀಗೆ ಇತರ ಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.  ಉದಾಹರಣೆಗೆ ಹೇಳಬೇಕೆಂದರೆ  ಮೆಕ್ಕೆಜೋಳ ಹುಳಿ.
2) ಬ್ಯಾಕ್ಟೀರಿಯಾ ಇಂದ ಹರಡುವ ರೋಗಗಳು – ಇದರಿಂದ ಹರಡುವ  ರೋಗಗಳು ಕೂಡ  ದೊಡ್ಡದಾಗಿ ಬೆಳೆಗಳಿಗೆ ಹಾನಿ ಉಂಟು ಮಾಡುತ್ತದೆ. ಉದಾಹರಣೆ ಎಂದರೆ , ದಾಳಂಬರಿಯ  ಬ್ಯಾಕ್ಟೀರಿಯಾ  ಚುಕ್ಕೆ  ರೋಗ.
3) ವೈರಸ್ ನಿಂದ ಹರಡುವ ರೋಗಗಳು  ಕಡಲೆ ನಿಂಬು ಅರಿಶಿಣ ಹಾಗೂ ಮುಂತಾದ ಬೆಳೆಗಳಿಗೆ  ಬಹಳ ಹಾನಿ ಉಂಟುಮಾಡುತ್ತದೆ.

ಹಾಗಾದರೆ ಈ ರೋಗಗಳ ಲಕ್ಷಣಗಳೇನು ? ಬನ್ನಿ ತಿಳಿಯೋಣ. ರೋಗಗಳನ್ನು ನಾವು ಪತ್ತೆ ಹಚ್ಚಬೇಕಾದರೆ , ನಾವು ಬೆಳೆಗಳನ್ನು ಹಂತ ಹಂತವಾಗಿ ಸಮಯಕ್ಕೆ ತಕ್ಕಂತೆ ಎಲ್ಲಾ ಗಿಡದ ಭಾಗಗಳಲ್ಲಿ, ರೋಗಗಳ ಲಕ್ಷಣಗಳನ್ನು ಗಮನಿಸಬೇಕಾಗುತ್ತದೆ.
ಮೊದಲನೆಯದಾಗಿ ಎಲೆಗಳಲ್ಲಿ, ಬಣ್ಣ ಬದಲಾಗುವುದು  ಅಂದರೆ ಹಸಿರು ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು, ಅಥವಾ ಎಲೆಗಳು ಕುಸಿದು ಹೋಗುತ್ತಿರುವುದು, ಕಂದು ಬಣ್ಣದ ಚುಕ್ಕೆ ನಿರ್ಮಾಣವಾಗುವುದು  ರೋಗಗಳ ಮುಖ್ಯ ಲಕ್ಷಣವಾಗಿದೆ.
ಹಾಗೆಯೇ  ಬೆಳೆಯ ಕಾಂಡದಲ್ಲಿ  ಮಗುಚು ಬೀಳುವುದು , ಚುಕ್ಕಿಗಳ ನಿರ್ಮಾಣವಾಗುವುದು ಮತ್ತು ಹೂವು ಮತ್ತು ಹಣ್ಣುಗಳಲ್ಲಿ, ಪ್ರಮಾಣತೆ ಕಡಿಮೆಯಾಗುವುದು , ಬಣ್ಣ ಬದಲಾವಣೆ ಮತ್ತು ಕುಸಿದು ಬೀಳುವುದು , ಇವು ರೋಗದ ಮುಖ್ಯವಾದ ಅಂತಹ ಲಕ್ಷಣಗಳಾಗಿವೆ.

ಹಾಗಾದರೆ ಈ ರೋಗಗಳನ್ನು ಹೇಗೆ ತಡೆಗಟ್ಟಬೇಕು?
1) ಬೆಳೆ ಚಕ್ರ ವ್ಯೂಹ ರೈತರು ತಾವು ಬೆಳೆದ ಬೆಳೆಯನ್ನು ತಮ್ಮ ಹೊಲದಲ್ಲಿ ತಿರುಗಿ ಮತ್ತೆ ಬೆಳೆಯಬಾರದು, ಉದಾಹರಣೆಗಾಗಿ  ನೀವು ಕರೀಬ್ ಸೀಸನ್ ನಲ್ಲಿ ಜೋಳವನ್ನು ಬೆಳೆದರೆ  ಮುಂದಿನ ಕರೀಬ್ ಸೀಸನ್ ನಲ್ಲಿ ಯಾವುದಾದರೂ ಕಾಳು ಬೆಳೆಗಳನ್ನು ಬೆಳೆಯಬೇಕಾಗುತ್ತದೆ, ಇದರಿಂದ ರೋಗವನ್ನು ನಿರ್ವಹಣೆ ಮಾಡಬಹುದು.
2) ರೈತರು ತಮ್ಮ ಹೊಲದಲ್ಲಿ ರೋಗ ನಿರೋಧಕ ತಳಿಗಳನ್ನು ಬೆಳೆಸಬೇಕಾಗುತ್ತದೆ, ರಿಂದ ಹೊಲದಲ್ಲಿ ಬಳಸುವ ಕೆಮಿಕಲ್ಸ್ ಗಳನ್ನು ಕೂಡ ಕಡಿಮೆ ಮಾಡಬಹುದು ಹಾಗೂ ಹೊಲದಲ್ಲಿ ಮಣ್ಣಿನ  ಫಲವತ್ತತೆಯನ್ನು ಕೂಡ  ಕಾಪಾಡಿಕೊಳ್ಳಬಹುದು.
3) ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಗೊಬ್ಬರ , ಮತ್ತು ಜೀವಾಮೃತ ಬೀಜಾಮೃತ ಹಾಗೂ ಪಂಚ ಗಾಯ ಕೃಷಿಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ, ಇದರಿಂದ ನಾವು ರೋಗದ ನಿರ್ವಹಣೆಯನ್ನು ಮಾಡಬಹುದು.

ಸಾಂಸ್ಕೃತಿಕ ವಿಧಾನಗಳಿಂದ ರೋಗನಿರ್ವಹಣೆ
ಬೆಳೆಗಳ ನಡುವೆ ವಿಶಾಲ ಅಂತರವಿರಬೇಕು – ಇದರಿಂದ ರೋಗ ಬಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹರಿದಂತೆ ನೋಡಿಕೊಳ್ಳುತ್ತದೆ.
ಮತ್ತು ಗಿಡಗಳನ್ನು ತಕ್ಕ ಸಮಯದಕ್ಕೆ ಕಟಾವು ಮಾಡಬೇಕು ಅಥವಾ ಬೇಸಾಯವನ್ನು ತಡವಾಗಿ ಶುರು ಮಾಡಬೇಕು ಇದರಿಂದ ರೋಗ ಹರಡುವುದನ್ನು ನಾವು 40 ರಿಂದ 50 ಪರ್ಸೆಂಟ್ ನಷ್ಟು ಕಡಿಮೆ ಮಾಡಬಹುದು.

ಜೈವಿಕ ರಸ ಗೊಬ್ಬರಗಳಿಂದ ರೋಗನಿರ್ವಹಣೆ ಮಾಡುವುದು ಹೇಗೆ?
ಜೈ ವಿಕ ರಸವಬ್ಬರಗಳು ಹುಳಿ ಕೀಟಗಳನ್ನು ತಡೆಯಲು  ಸಹಾಯ ಮಾಡುತ್ತವೆ.  ಉದಾಹರಣೆಗಾಗಿ
ಬಯೋ ಪೆಸ್ಟಿಸೈಡ್ಸ್:** ಜೀವ ತಂತ್ರಜ್ಞಾನದಲ್ಲಿ ಉತ್ಪಾದಿಸಿದ ರಾಸಾಯನಿಕ ರಹಿತ ಪೆಸ್ಟಿಸೈಡ್ಸ್ ಬಳಕೆ.
ಮತ್ತು ರೋಗನಿರ್ವಹಣೆಗಾಗಿ  ನೈಸರ್ಗಿಕ ಶತ್ರುಗಳು ಅನ್ನು ಬೆಳೆಸುವುದು.   ಬೆಳೆಗೆ ಹಾನಿಕಾರಕ ಹುಳಿಗಳನ್ನು ತಿನ್ನುವ ಪಕ್ಷಿಗಳು, ಕೀಟಗಳಿಂದ ಕಾಪಾಡುತ್ತದೆ.
ಮತ್ತು ಟ್ರೈಕೊಡರ್ಮವಿರಿಡಿ ಎಂಬ ಜೈವಿಕ ಗೊಬ್ಬರ ಗಳಿಂದ ಬೀಜೋಪಚಾರ ಮಾಡುವುದರಿಂದ ಗಿಡಗಳು ರೋಗ ಮುಕ್ತವಾಗಿ ಬೆಳೆಯುತ್ತದೆ ಹಾಗೂ ಹೆಚ್ಚಿನ ಇಳುವರಿ ಕೊಡುತ್ತದೆ.

ರೋಗನಿರ್ವಹಣೆಯನ್ನು ರಾಸಾಯನಿಕ ಗೊಬ್ಬರ ಗಳಿಂದ ಕೂಡ ಮಾಡಬಹುದು.
ರೋಗಗಳನ್ನು ತಡೆಯಲು ರಾಸಾಯನಿಕಗಳನ್ನು ಬಳಸುವುದು:
ಪೆಸ್ಟಿಸೈಡ್ಸ್ ಬಳಿಕೆ  ಚುಕ್ಕೆ ರೋಗ , ಬೂದಿರೋಗ  ಹಾಗೆ ಮುಂತಾದ ರೋಗಗಳಿಗೆ  ಕಾರ್ಬೇದಿಜಿಮ್ ಪ್ರತಿ ಹೆಕ್ಟರ್ ಗೆ 500 ಗ್ರಾಂ ಗಳಷ್ಟು, ಅಥವಾ ಎರಡು ಗ್ರಾಮ್ಸ್  ಪ್ರತಿ ಒಂದು ಕೆಜಿ  ಬಿತ್ತನೆ ಬೀಜಗಳಿಗೆ  ಅಳವಡಿಸಬೇಕು.
ಪೌಡರಿ ರೋಗ ಹಾಗೂ ರಸ್ಟ್ ರೋಗಗಳಿಗೆ  metalaxy ಗೋಲ್ಡ್  ಬಂಗೀ ಸೈಡ್ ಅನ್ನು ಎರಡು ಕೆಜಿ ಪ್ರತಿ ಹೆಕ್ಟರ್ ಗೆ ಬಳಸಬೇಕಾಗುತ್ತದೆ. ಈ ರೀತಿಯಾಗಿ ಕೀಟನಾಶಕಗಳು ಕೂಡ  ಹೊಲದಲ್ಲಿ ರೋಗ ನಿರ್ವಹಣೆಯನ್ನು ಮಾಡುತ್ತದೆ.

ಸಮಗ್ರ ರೋಗನಿರ್ವಹಣೆಯಿಂದ ಕೃಷಿಯ  ರೋಗನಿರ್ವಹಣೆ ಮಾಡುವುದು ಒಂದು ಅತ್ಯುತ್ತಮವಾದ  ವಿಧಾನವಾಗಿದೆ , ಈ ವಿಧಾನದಲ್ಲಿ ಎಲ್ಲ ರೀತಿಯಾದಂತಹ  ವಿಧಾನಗಳು ಉದಾಹರಣೆಗಾಗಿ  ನೈಸರ್ಗಿಕ ವಿಧಾನ, ಜೈವಿಕ ವಿಧಾನ , ನೈಸರ್ಗಿಕ ವಿಧಾನ ಹಾಗೂ ಮುಂತಾದವುಗಳನ್ನು  ಅಳವಡಿಸಿಕೊಂಡು  ರೋಗವನ್ನು ನಿರ್ವಹಣೆ ಮಾಡಲಾಗುತ್ತದೆ. ಇದನ್ನು ಇಂಗ್ಲಿಷ್  ನಲ್ಲಿ  IDM ಎಂದು ಕರೆಯಲಾಗುತ್ತದೆ. ಇದರಿಂದ ಖರ್ಚು ಕಡಿಮೆಯಾಗಿ ಉತ್ಪಾದನೆಯನ್ನು ಹೆಚ್ಚು ಮಾಡಲು  ವಿಜ್ಞಾನಿಗಳು  ಈ ವಿಧಾನವನ್ನು  ಬಳಕೆ ಮಾಡಲು  ಸೂಚಿಸುತ್ತಾರೆ.

ಜೋಳದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಕೀಟಗಳು ಹಾಗೂ  ಕೀಟ ನಿರ್ವಹಣೆ ಕ್ರಮಗಳು.

1) ಸುಳಿ ನೊಣ 
ಈ ಕೀಡೆಯೂ ಸುಳಿಯ ಬುಡ ಉಜ್ಜಿ ಕತ್ತರಿಸುತ್ತದೆ, ಮತ್ತು ಸತ್ತ ಸಸಿಗಳು ಕಿತ್ತಿದರೆ ಸರಳವಾಗಿ ಬರುವುದು  ಈ ಕ್ರೀಡೆ ಒಮ್ಮೆ ಹೊಲದಲ್ಲಿ ಬಂದರೆ ಸುಮಾರು 80 ರಿಂದ 90 ಪರ್ಸೆಂಟ್ ಹಾನಿ ಮಾಡುತ್ತದೆ.

ನಿರ್ವಹಣೆ
ಸಾಮಾನ್ಯವಾಗಿ ಇದು ಜನವರಿ ಮತ್ತು ಜೂನ್ ನಡುವೆ ಬಿತ್ತಿದ ಬೆಳೆಗಳಲ್ಲಿ ಕಂಡುಬರುವುದಿಲ್ಲ. ನೀವು ಏನಾದರೂ ಬಿತ್ತನೆ  ತಡವಾಗಿ ಮಾಡಿದ್ದರೆ ಒಂದು ಕೆಜಿ ಬೀಜ  ಹೆಚ್ಚಿಗೆ ಬಳಸಬೇಕಾಗುತ್ತದೆ. ಏಕೆಂದರೆ ನೀವು ಸಸಿಗಳ ಸಂಖ್ಯೆಯನ್ನು ಕಾಪಾಡಬೇಕಾಗುತ್ತದೆ.

ಮತ್ತು ಪ್ರತಿ ಕೆಜಿ ಬೀಜಕ್ಕೆ ನೀವು 5 ಎಂಎಲ್  ಫ್ಲೋರ್ ಪೈರಿ ಫಾಲ್ಸ್  20 EC ನೀರಿನೊಂದಿಗೆ ಮಿಶ್ರಣ ಮಾಡಿ ಬಿಜುಪಚಾರ ಮಾಡಬೇಕು, ಅಂತರ ಅದನ್ನು ಒಣಗಿಸಿ ಬಿತ್ತನೆ ಮಾಡುವುದರಿಂದ ನೀವು  ಕೀಟಗಳನ್ನು ತಡೆಗಟ್ಟಬಹುದು.

ಮತ್ತು ಜುಲೈ ನಂತರ ಬಿತ್ತಿದ ಬೆಳೆಗಳಿಗೆ ಪ್ರತಿ ಎಕರೆಗೆ  12 ಕೆಜಿ  ಕಾರ್ಬೋ ಫ್ಯೂರನ್  3% ಅಥವಾ 12 ಕೆ.ಜಿ  ಫೋರೆಟ್ 10% ಹರಳುಗಳನ್ನು ಬಿತ್ತನೆಗೆ ಮೊದಲಾಗಿ ಸಾಲುಗಳಲ್ಲಿ ಬಿತ್ತನೆ ಮಾಡಬೇಕು.

ಬಿತ್ತನೆ ನಂತರ ಈ ಕೀಟಗಳು ಕಾಣಿಸಿಕೊಂಡಲ್ಲಿ  ಇದನ್ನು ಹತೋಟಿಯಲ್ಲಿ ತರಲು 0.3 ml ಇಮೇಡಂಕ್ಲೋಪ್ರಿಡ್ 17.8 ಎಸ್ ಎಲ್ ಅನ್ನೋ ಪ್ರತಿ ಲೀಟರ್ ನಲ್ಲಿ ಬೆರೆಸಿ 12 ರಿಂದ 14 ದಿವಸದ ನಂತರ ಸಿಂಪರಣೆ ಮಾಡಬೇಕು.

ಸುಳಿ ತಿಗಣೆ 

ಇದರ ಬಾಧೆಯು ಕೇವಲ ಹಿಂಗಾರು ಜೋಳದಲ್ಲಿ ಮಾತ್ರ ಕಂಡು ಬರುತ್ತದೆ  ಮರಿ ಹಾಗೂ ದೊಡ್ಡ ಕೀಟಗಳು ಸುಳಿಯಲ್ಲಿ ಗುಂಪು ಗುಂಪಾಗಿ ಕಂಡು ಬರುತ್ತದೆ, ಇದರಿಂದ ಎಲೆಗಳಲ್ಲಿ ಕರೀ ಹಿಪ್ಪೆ ಲೇಪನವಾಗಿ ಬೆಳವಣಿಗೆಯಲ್ಲಿ ಕೊಂದು ಉಂಟುಮಾಡುತ್ತದೆ.

ಇದು ಹೊಲದಲ್ಲಿ ಕಂಡು ಬಂದಲ್ಲಿ  ನೀವು 5 ಗ್ರಾಂ ಇಮಿಡಾಕ್ಲೊಪರೇಟ್  60 wp ಇಂದ ಬೀಜೋಪಚಾರ ಮಾಡಬೇಕಾಗುತ್ತದೆ 

ಅಥವಾ ಪ್ರತಿ ಎಕರೆಗೆ 3 ಕೆ.ಜಿಯಂತೆ ಕಾರ್ಬೊ ಪ್ಯುರಾನನ್ನು ಹರಳು ಮುಖಾಂತರದಲ್ಲಿ ನೀವು ನಿಮ್ಮ ಹೊಲದಲ್ಲಿ ಬಿತ್ತನೆ ಮಾಡಬೇಕಾಗುತ್ತದೆ.

ಸೈನಿಕ ಹುಳು ಅಥವಾ ಲದ್ದಿ ಹುಳು.

ಮರಿ ಕೀಡೆಗಳು ಎಲೆಯನ್ನು ಅಂಚಿನಿಂದ ತಿನ್ನುವುದರಿಂದ  ಇಳುವರಿಯಲ್ಲಿ ಬಹಳ  ಹಾನಿ ಉಂಟು ಮಾಡುತ್ತದೆ , ಮತ್ತು ಸುಳಿಯಲ್ಲಿ ಕ್ರೀಡೆಯ ಲದ್ದಿಯು ಕಾಣುತ್ತದೆ. ಇದು ಸುಮಾರು 30 ರಿಂದ 40% ನಷ್ಟು ಹಾನಿ ಉಂಟುಮಾಡುತ್ತದೆ.

ಕಳಿತಾ ಭಾಷಣವನ್ನು ಎಕರೆಗೆ 20 ಕೆಜಿ ಎಷ್ಟು ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ  ನಾಶಕಗಳನ್ನು ಹೊಲದಲ್ಲಿ ಎರಚಬೇಕಾಗುತ್ತದೆ.

ಜೋಳದ ರೋಗಗಳು
ಕಾಡಿಗೆ ರೋಗ 

ರೋಗದಲ್ಲಿ ಪೀಡಿತ ಬೆಳೆಯು ಬೆಳವಣಿಗೆ ಕುಂಠಿತವಾಗುತ್ತದೆ ಬೇರಿನ ಮೂಲಕ ರೋಗಾನುಗಳು ಬೆಳೆದುಕೊಂಡು ತೆನೆಗಳಲ್ಲಿ ಮುಖ್ಯವಾಗಿ ಹಾನಿ ಉಂಟುಮಾಡುತ್ತದೆ.

ಒಂದು ಕೆಜಿ ಬೀಜಕ್ಕೆ ಅಂದಾಜು ಎರಡು ಗ್ರಾಂ  ಗಂಧಕ ಅಥವಾ ಕಪ್ತಾನನ್ನು  80 wp ಲೇಪನ ಮಾಡಿ ಬಿತ್ತಬೇಕಾಗುತ್ತದೆ. ಅಥವಾ ಕಾರ್ಬನ್ ಡೈಜೆಷನ್ ಅನ್ನು  o. 1 gr ಪ್ರತಿ ಲೀಟರ್ ಗೆ  ಮಿಶ್ರಣ ಮಾಡಿ  ಹೊಲಕ್ಕೆ ಸಿಂಪರಣೆ ಮಾಡಬೇಕಾಗುತ್ತದೆ.

ತುಕ್ಕುರೋಗ.
ಈ ರೋಗದ ಮುಖ್ಯವಾದ ಲಕ್ಷಣಗಳೇನೆಂದರೆ  ಮೊದಲಿಗೆ ಕೆಳಗಿನ ಎಲೆಗಳ ಮೇಲೆ ರೋಗವು ಕಂಡು ಬರುತ್ತದೆ , ರೋಗದ ಮುಖ್ಯ ಲಕ್ಷಣಗಳೆಂದರೆ  ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ, ನಂತರ ಈ ಚುಕ್ಕೆಗಳು ಎಲೆಗಳ ಮೇಲಿನ ಭಾಗದಲ್ಲಿ ಕಂಡುಬರು ಬರುತ್ತವೆ.

ನಿರ್ವಹಣೆ
ಬೆಳಗಿನ ಎಲೆಗಳಲ್ಲಿ ರೋಗ ಕಂಡು ಕೂಡಲೇ ಎರಡು ಗ್ರಾಂ ಮಂಕೋ ಜೆಬ್  75 wp ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಒಂದು ವಾರದ ಅಂತರದಲ್ಲಿ  ರಾಜು ಮೂರು ಸಾರಿ ಸಿಂಪರಣೆ ಮಾಡಬೇಕಾಗುತ್ತದೆ.

ಅಥವಾ ಮೂರು ಗ್ರಾಂ ಮೆಟಲ್ ಆಕ್ಸಿಲ  4% + ಮಂಕೋ ಜೆಬ್  64% ಶಿಲೀಂದ್ರ ನಾಶಕವನ್ನು ಪ್ರತಿ ಕೆಜಿ ಬೀಜಕ್ಕೆ ಲೇಪಿಸಿ ಬಿತ್ತುವುದರಿಂದ ರೋಗ ನಿರ್ವಹಣೆ ಆಗುತ್ತದೆ.

ಕಾಳಿನ ಬೂಸ್ಟ್ ರೋಗ 
ಹೀರೋಗಳು ಕಾಳು  ಮೂಗುತ್ತಿದ್ದಾಗ  ಹೆಚ್ಚಿನ ಮಳೆಯ ಪ್ರಮಾಣದಿಂದ ಕಾಣಿಸಿಕೊಳ್ಳುತ್ತದೆ  ಈ ರೋಗದಿಂದ ಕಾಳಿನ ಬಣ್ಣ ಕಪ್ಪಾಗುತ್ತದೆ.

ಈ ರೋಗದ ನಿರ್ವಹಣೆ ಮಾಡಲು ಬೇಕೆಂದರೆ  ನೀವು ರೋಗನಿರೋಧಕ ತಳಿಗಳನ್ನು ಮಾತ್ರ  ನಿಮ್ಮ ಹೊಲದಲ್ಲಿ ಬಿತ್ತನೆ ಮಾಡಬೇಕಾಗುತ್ತದೆ. ರೋಗನಿರೋಧಕ  ತಳಿಗಳಿಗೆ ಉದಾಹರಣೆ 
DSV-6.

ರೈತರಿಗೆ ಸಿಹಿ ಸುದ್ದಿ: ನಿಮ್ಮ ಆದಾಯ ಹೆಚ್ಚಿಸಲು ಬಂತು ಕೃಷಿ ಡ್ರೋನ್… ಏನಿದರ ಮಹತ್ವ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. https://mediachanakya.com/multiple-use-of-drones-in-agriculture-to-enhance-farmers-income/

ಇದೇ ರೀತಿ ನಾನಾ ತರಹದ ದವಸ ಧಾನ್ಯಗಳ ಬಗ್ಗೆ, ಹಾಗೂ ಅದರ ರೋಗ ಹಾಗೂ ಕೀಟನಾಶಕಗಳ ಬಗ್ಗೆ ಮಾಹಿತಿಯನ್ನು ತಿಳಿಯಲು ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು. ಕೂಡಲೇ ನಮ್ಮ  ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಕೃಷಿ ವಿಚಾರ ಒಂದು  ಸಾಮಾಜಿಕ ಜಾಲತಾಣವಾಗಿದ್ದು ಇದರಲ್ಲಿ ನೀವು ಕೃಷಿಗೆ ಸಂಬಂಧಿಸಿದ ಎಲ್ಲಾ  ಯೋಜನೆಗಳನ್ನು, ನೈಸರ್ಗಿಕ ಕೃಷಿ ಹಾಗೂ  ನಿಮ್ಮ ಹೊಲದಲ್ಲಿ ಕಂಡುಬರುವಂತಹ ಎಲ್ಲ ತೊಂದರೆಗಳಿಗೆ ಉತ್ತರ ಕೊಡುವ ಒಂದು ದೊಡ್ಡ ಜಾಲತಾಣದ ವೆಬ್ಸೈಟ್ ಆಗಿದೆ. ಮಾಹಿತಿ ಉಪಯೋಗವೆನಿಸಿದ್ದರಲ್ಲಿ  ದಯವಿಟ್ಟು ಹೆಚ್ಚಿನ ರೈತರಿಗೆ ಶೇರ್ ಮಾಡಿ.

ಹಾಗೂ ಇದೇ ರೀತಿಯಾದಂತಹ  ಜ್ಞಾನ ವಿಧದ ಯೋಜನೆಗಳು  ಉದಾಹರಣೆಗಾಗಿ  ಬೆಳೆ ಪರಿಹಾರ ಪೇಮೆಂಟ್, ನರೇಗಾ ಯೋಜನೆ , ಪಿಎಂ ಕಿಸಾನ್ ಯೋಜನೆ , ಮತ್ತು ಕರ್ನಾಟಕದ ಐದು ಗ್ಯಾರಂಟಿಗಳಲ್ಲಿ  ಯಾವುದೇ ರೀತಿಯಾದಂತಹ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಕೂಡ ಈ ವೆಬ್ಸೈಟ್ ನಿಮಗೆ ಎಲ್ಲವನ್ನು ತಿಳಿಸಿಕೊಡುತ್ತದೆ.

ಬೆಳೆ ಪರಿಹಾರ ಪೇಮೆಂಟ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಕೂಡಲೇ ಈ ಲಿಂಕ್ ಅನ್ನು ಒತ್ತಿ
https://krushivichara.com/index.php/2024/05/27/bele-parihara-payment-status-has-been-updated-please-check-your-status/

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಇಲ್ಲಿದೆ ಸಂಪೂರ್ಣ ಮಾಹಿತಿ https://krushivichara.com/index.php/2024/05/28/kisan-credit-card-uses-how-to-apply-this-online-know-full-derails/

ಮಣ್ಣು ಪರೀಕ್ಷೆ ಆಧಾರಿತ ಮೇಲೆ ರಸಗೊಬ್ಬರಗಳ ಬಳಿಕೆ https://krushivichara.com/index.php/2024/05/31/soil-testing-procedure-and-know-more-about-soil-teating/


Spread the love
WhatsApp Group Join Now