ಪ್ರಿಯ ರೈತ ಬಾಂಧವರಿಗೆ ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ನಮಸ್ಕಾರಗಳು. ಭಾರತ ಒಂದು ಕೃಷಿ ಆಧರಿತ ದೇಶವಾಗಿದೆ. ಭಾರತದ ಸುಮಾರು 30ಪಟ್ಟು ಜನಸಂಖ್ಯೆಯು ಕೃಷಿಯಾಧಾರಿತ ಅಥವಾ ಕೃಷಿಗೆ ಸಂಬಂಧಿಸಿದ ಕೆಲಸವನ್ನು ಮಾಡುತ್ತಿದ್ದಾರೆ.
ಆದರೆ ರೈತ ಹಲವಾರು ಪ್ರಕೃತಿಕ ಹಾಗೂ ಇತರೆ ವಿಷಯಗಳಿಂದ ಕೃಷಿಯಲ್ಲಿ ನಾನಾ ತರದ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ಅತಿವೃಷ್ಟಿ ಅನಾವೃಷ್ಟಿ , ಮಾರುಕಟ್ಟೆಯಲ್ಲಿ ಸರಿಯಾದ ಹಣ ಸಿಗಲಾರದು ಹೀಗೆ ಹಲವು ತೊಂದರೆಗಳನ್ನು ಅನುಭವಿಸುತ್ತಾ ಬಂದಿದ್ದಾನೆ.
ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವು , ರೈತನಿಗೆ ಆರ್ಥಿಕವಾಗಿ ಸಹಾಯ ಮಾಡಲೆಂದು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇವೆ. ಇಂತಹದ್ದೇ ಒಂದು ಯೋಜನೆಯ ಬಗ್ಗೆ ಇಂದು ನಾವು ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತೇವೆ.
ಹೌದು ಸ್ನೇಹಿತರೆ ನಾವು ಇಂದು ಭಾರತ ಸರಕಾರದ ಒಂದು ಯೋಜನೆಯದಂತ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಏನಿದು ಪಶು ಕಿಸಾನ್ ಕ್ರೆಡಿಟ್ ಕಾರ್ಡ್?
ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಇದು ಮೋದಿ ಸರಕಾರದ ಒಂದು ಯೋಜನೆಯಾಗಿದ್ದು ಇದರಲ್ಲಿ ರೈತನಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಅಂದಾಜು ಮೂರರಿಂದ ಐದು ಲಕ್ಷದವರೆಗೆ ಸಾಲವನ್ನು ಪಡೆಯಬಹುದು.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತನ ಹಸು ಕುರಿ ಎಮ್ಮೆ ಮೇಕೆ ಹಾಗೂ ಕೋಳಿ ಸಾಕಾಣಿಕೆಗಾಗಿ ಅಂದಾಜು ಮೂರು ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆಯಬಹುದು.
ಮತ್ತು ಇದರಲ್ಲಿ ಒಂದು ಪಾಯಿಂಟ್ ಆರು ಲಕ್ಷ ರೂಪಾಯಿಗಳನ್ನು ಯಾವುದೇ ರೀತಿಯಾದಂತಹ ಗ್ಯಾರಂಟಿಗಳನ್ನು ನೀಡದೆ ಸಾಲವನ್ನು ಪಡೆಯಬಹುದು.
ದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ರೈತನಿಗೆ ಆರ್ಥಿಕವಾಗಿ ನೆರವಾಗಲು ಹಾಗೆ , ಜನರು ಕೃಷಿಯ ಬಗ್ಗೆ ಹೆಚ್ಚಿಗೆ ಹೊತ್ತು ನೀಡಬೇಕೆಂದು ಹೀಗೆ ನಾನಾ ಕಾರಣಗಳಿಂದ ಈ ಯೋಜನೆಯನ್ನು ಸರಕಾರವು ಜಾರಿಗೆ ತಂದಿದೆ.
ರೈತನು ತನ್ನ ಹೊಲದಲ್ಲಿ ಕೃಷಿಗೆ ಸಂಬಂಧಿಸಿದ ಹೊಸದಾಗಿ ಯಾವುದಾದರೂ ಬಿಸಿನೆಸ್ ಮಾಡಲು ಬೇಕಾಗುವ ಬಂಡವಾಳಕ್ಕೆ ಈ ಯೋಜನೆಯು ಸಹಾಯವಾಗುತ್ತದೆ.
ಪಶು ಸಂಗೋಪನೆ ಉದ್ಯಮ ಹಾಗೂ ಕುರಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಉದ್ಯಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆವಣಿಗೆ ಮಾಡಲು ಈ ಯೋಜನೆಯು ಸಹಾಯ ಮಾಡುತ್ತದೆ.
ಈ ಯೋಜನೆ ರೈತನಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ. ಮೊದಲನೆಯದಾಗಿ ಈ ಯೋಜನೆಯು ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ ಮತ್ತು ಕುರಿ ಸಾಕಾಣಿಕೆಗೆ ಮತ್ತು ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತದೆ.
ರೈತನು ಈ ಕಾರ್ಡ್ ಮುಖಾಂತರ ಅತ್ತಿ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಯಾವುದೇ ತರಹದ ಗ್ಯಾರಂಟಿ ನೀಡದೆ ಸಾಲವನ್ನು ಪಡೆಯಬಹುದು.
ರೈತನು ಅಂದಾಜು ಎಷ್ಟು ಹಣ ಈ ಯೋಜನೆಯ ಮುಖಾಂತರ ಪಡೆಯಬಹುದು ಎಂದರೆ, ಪ್ರತಿ ಹಸುವಿಗೆ ಅಂದಾಜು 40,000 ಹಾಗೂ ಎಮ್ಮೆಗೆ 60,000 ಹಾಗೂ ಪ್ರತಿ ಕುರಿ ಹಾಗೂ ಮೇಕೆ ಸಾಕಾಣಿಕೆಗೆ ಅಂದಾಜು ನಾಲ್ಕು ಸಾವಿರ ರೂಪಾಯಿ ಮತ್ತು ಮೊಟ್ಟೆ ಇಡುವ ಕೋಳಿಗೆ ಪ್ರತಿ ಕೋಳಿಗೆ ಅಂದಾಜು 720 ಗಳನ್ನು ಪಡೆಯಬಹುದು.
ಇದನ್ನು ಓದಿ hydrophonics ಮಣ್ಣು ರಹಿತ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ
ಈ ಯೋಜನೆಯ ಮುಖಾಂತರ ಪಡೆದಂತ ಸಾಲಗಳಿಗೆ ಅತಿ ಕಡಿಮೆ ಬಡ್ಡಿದರ ಇದ್ದು ಅಂದಾಜು ಸುಮಾರು ನಾಲ್ಕು ಬಡ್ಡಿ ದರದಲ್ಲಿ ನಿಮಗೆ ಲೋನ್ ಸಿಗುತ್ತದೆ.
ಈ ಯೋಜನೆಯ ಲಾಭ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?
ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಆಸಕ್ತ ರೈತರು ಅಥವಾ ಅರ್ಜಿದಾರರು ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿಗೆ ಅಗತ್ಯವಿರುವ ಎಲ್ಲ ದಾಖಲಾತಿಗಳನ್ನು ಅರ್ಜಿದಾರರು ನೀಡಬೇಕು.
ಅರ್ಜಿ ಪತ್ರದಲ್ಲಿ ಕೇಳಿದ ಎಲ್ಲ ಮಾಹಿತಿಯನ್ನು ರೈತರು ಪರಿಶೀಲಿಸಿ ಉತ್ತರ ನೀಡಬೇಕು.
ಎಲ್ಲಾ ಡಾಕ್ಯುಮೆಂಟ್ಸ್ ಜೊತೆಗೆ ಆ ಅರ್ಜಿ ಪತ್ರವನ್ನು ತೆಗೆದುಕೊಂಡು ಬ್ಯಾಂಕ್ ಅಧಿಕಾರಿಗೆ ರೈತರು ನೀಡಬೇಕು.
ಅರ್ಜಿ ಸಲ್ಲಿಸಿದ ಸುಮಾರು ಒಂದು ತಿಂಗಳಿಗೆ ನಿಮಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗುತ್ತದೆ.
ಇದೇ ರೀತಿ ಕೃಷಿ ಚಟುವಟಿಕೆಗಳಲ್ಲಿ ಪ್ರಾಮುಖ್ಯ ಪಡೆದಂತಹ ಹೈನುಗಾರಿಕೆ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಹೀಗೆ ಮುಂತಾದವುಗಳನ್ನು , ನೆನಪಿನಲ್ಲಿಟ್ಟುಕೊಂಡು ಈ ಯೋಜನೆಯು ಇಂತಹ ರೈತರಿಗೆ ಸಹಾಯವಾಗಲೆಂದು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರವು ರೈತನ ಹಿತಕ್ಕಾಗಿ ಮತ್ತು ಹಾಲನ್ನ ಉತ್ಪಾದನೆ ಹೆಚ್ಚು ಮಾಡುವ ಉದ್ದೇಶದಿಂದ ಎರಡು ಲಕ್ಷ ಡೈರಿ ಫಾರ್ಮ್ ಗಳನ್ನು ತೆರೆದಿದ್ದಾರೆ.
ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವು ಒಟ್ಟಾಗಿ ರೈತನ ಇಳುವರಿ ಹೆಚ್ಚು ಮಾಡಲೆಂದು ಹಾಗೂ ರೈತನ ಆದಾಯ ದ್ವಿಗುಣ ಮಾಡಲೆಂದು ಈಗಾಗಲೇ ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದಾರೆ ಮತ್ತು
ಕಿಸಾನ್ ಕ್ರೆಡಿಟ್ ಕಾರ್ಡ್ ಏಕೆ ಬೇಕು
ರೈತನಿಗೆ ಹೆಚ್ಚು ಆದಾಯವ ಪಡೆಯ ಪಡೆಯ ಉದ್ದೇಶದಿಂದ ಹಾಲು ಒಕ್ಕೂಟದವರ ಜೊತೆಗೆ ಮೀಟಿಂಗ್ ಮಾಡಿ ಹಾಲಿನ ದರವನ್ನು ಕೂಡ ಹೆಚ್ಚಿಗೆ ಮಾಡಿದ್ದಾರೆ.
ಅದೇ ರೀತಿಯಾಗಿ ಎರಡು ಲಕ್ಷ ಹೊಸ ಕೃಷಿ ಸಾಲ ಸಂಘಗಳು , ಮೀನುಗಾರಿಕೆ ಹಾಗೂ ಇತರೆ ಸಂಬಂಧ ಪಟ್ಟಂತಹ ವಿಷಯಗಳಿಗೆ ಲೋನ್ ನೀಡುವ ಕಾರ್ಯ ಮಾಡಲಿದೆ.
ಈಗಿನ ಸಮಯದಲ್ಲಿ ಒಟ್ಟಾರೆ ಎಷ್ಟು ಡೈರಿ ಸಹಕಾರ ಸಂಘಗಳಿವೆ ಹಾಗೂ ಈ ಸಂಘಗಳು ರಾಜ್ಯದಲ್ಲಿ ಇರುವ ಸಂಖ್ಯೆಗಳು ಎಷ್ಟು?
ಈಗಿನ ಸಮಯದಲ್ಲಿ ಸುಮಾರು 100000 PACS ಗಳಲ್ಲಿ ಸುಮಾರು 60,000 ಕ್ರಿಯಾತ್ಮಕ PASC ಗಳಿವೆ.
ಇನ್ನು ಅಂದಾಜು ಒಂದೂವರೆ ಲಕ್ಷ ಪಂಚಾಯತಿಗಳು ಎಪಿಎಂಸಿ ಇಲ್ಲದಿದ್ದು. ಮಾರು ಎರಡು ಲಕ್ಷ ಹೈನುಗಾರಿಕೆ ಸಹಕಾರ ಸಂಘಗಳಿವೆ.
ಯೋಜನೆಯ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಯನ್ನು ನಬಾರ್ಡ್,
ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಕೂಡಿ ಸಿದ್ಧಪಡಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ತರಹದ ಹೊಸ ಸಹಕಾರಿ ಸಂಘಗಳನ್ನು ಸ್ಥಾಪಿಸುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಪ್ರದೇಶಗಳಲ್ಲಿ ಹೆಚ್ಚಾಗಿ ಉದ್ಯೋಗದ ಅವಕಾಶಗಳನ್ನು ನೀಡಬಹುದು.
ಇದರಿಂದ ಯುವ ರೈತರು ಯಾವುದೇ ತರಹದ ಕಷ್ಟ ಅನುಭವಿಸದೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ಭೂ ತಮಗೆ ಬೇಕಾದಂತಹ ಅಗ್ರಿಕಲ್ಚರ್ ಅಥವಾ ಕೃಷಿ ಸಂಬಂಧಿಸಿದೆ ವ್ಯಾಪಾರ ಕೂಡ ಮಾಡಬಹುದು.
ಅಂದಾಜು ಒಂದು ಪಾಯಿಂಟ್ ಐದು ಕೋಟಿ ಸದಸ್ಯರನ್ನು ಬಂದಿರುವ ಈ ಎರಡು ಲಕ್ಷಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳು. ರೈತರಿಗೆ ಸಹ ಲೋನ್ ಒದಗಿಸುವುದು, ಹಾಲನ್ನು ಪರೀಕ್ಷೆ ಮಾಡುವುದು , ಜಾನುವಾರು ಆಹಾರ ಹಾಗೂ ಜಾನುವಾರುಗಳನ್ನು ಮಾರಾಟ ಮಾಡುವುದು,
ಮತ್ತು ರೈತನು ತನ್ನ ಬಿಸಿನೆಸ್ ಅನ್ನು ವಿಸ್ತರಣೆ ಮಾಡುವುದರಲ್ಲಿ ಸಹಾಯ ಮಾಡುವುದು. ಹೀಗೆ ನಾನಾ ತರಹದಲ್ಲಿ ರೈತನಿಗೆ ಈ ಸಂಘಗಳು ಸಹಾಯ ಮಾಡುತ್ತವೆ. ಹಾಗೂ ಮೀನುಗಾರಿಕೆ ಸಹಕಾರಿ ಸಂಘಗಳು ಮಾರುಕಟ್ಟೆಯಲ್ಲಿ ರೈತನಿಗೆ ಸಹಾಯ ಮಾಡುತ್ತವೆ.
ಮೀನು ಬೀಜ ಮತ್ತು ಫೀಡ್ ಅನ್ನು ಖರೀದಿಸಲು ಸಹಾಯ ಮಾಡುತ್ತವೆ, ಜೊತೆಗೆ ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಕೂಡ ಈ ಸಂಘಗಳು ನೀಡುತ್ತವೆ.
ಕಿಸಾನ್ ಕ್ರೆಡಿಟ್ ಕಾರ್ಡು ಉಪಯೋಗಗಳು
ಕೇಂದ್ರ ಸರಕಾರವು ಹಾಗೂ ರಾಜ್ಯ ಸರಕಾರವು ರೈತನ ಏಳಿಗೆಗಂದೆ ಈ ಎಲ್ಲ ಸಂಘಗಳ ನಿರ್ಮಾಣ ಮಾಡಿದೆ. ರೈತನಿಗೆ ಸಮಯಕ್ಕೆ ತಕ್ಕಂತೆ ಹಾಗೂ ತನ್ನ ಬಳಕೆಗೆ ತಕ್ಕಂತೆ ಈ ಸಂಘಗಳು ರೈತನಿಗೆ ಅತಿ ಕಡಿಮೆ ದರದಲ್ಲಿ ಬಡ್ಡಿಯನ್ನು ಒದಗಿಸಿ ಕೊಡುತ್ತದೆ.
ಭಾರತ ಸರಕಾರವು ಪಶು ಸಂಗೋಪನೆ ರೈತರ ಅನುಕೂಲಕ್ಕಾಗಿ ಪಶು ಕಿಸಾನ್ ಕ್ರೆಡಿಟ್ ಕಾರ್ಡನ್ನು ಜಾರಿಗೆ ತಂದಿದ್ದು. ಇದು ರೈತನ ಆದಾಯ ಹೆಚ್ಚು ಮಾಡಲು ಹಾಗೂ ರೈತನ ಇನ್ಕಮ್ ಡಬಲ್ ಮಾಡುವ ಯೋಜನೆಗೆ ಸಹಾಯ ಮಾಡುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಆರ್‌ಬಿಐ ಈ ಎಲ್ಲಾ ಪಶು ಸಂಗೋಪನೆ ರೈತರಿಗೆ ಹಾಗೂ ಮೀನುಗಾರಿಕೆ ಚಟುವಟಿಕೆಗಳಲ್ಲಿ ಇದ್ದ ರೈತರಿಗೆ ಲೋ ನೀಡುವ ಮುಖಾಂತರ ಹಾಗೂ ಕಾರ್ಡ್ ನೀಡುವ ಮುಖಾಂತರ ಸಹಾಯ ಮಾಡುತ್ತದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಒಂದು, ರೈತನ ಏಳಿಗೆಂದು ಮಾಡುವ ಯೋಜನೆ ಆಗಿದ್ದು ಈ ಕಾರ್ಡ್ ನ ಮುಖಾಂತರ ನೀವು, ಪ್ರತಿ ಹಸುಗೆ ನಲ್ವತ್ತು ಸಾವಿರ ರೂಪಾಯಿಗಳಷ್ಟು,
ಮತ್ತು ಪ್ರತಿ ಎಮ್ಮೆಗೆ 60 ಸಾವಿರ ರೂಪಾಯಿಗಳಷ್ಟು , ಮತ್ತು ಕುರಿ ಸಾಕಾಣಿಕೆಗೆ ಪ್ರತಿಕೂರಿಗೆ ನಾಲ್ಕು ಸಾವಿರ ರೂಪಾಯಿಗಳಷ್ಟು , ಮತ್ತು ಮೊಟ್ಟೆ ಇಡುವ ಕೋಳಿಗೆ ಪ್ರತಿ ಕೋಳಿಗೆ 720ಗಳಷ್ಟು
ಲೋನ್ ತೆಗೆದುಕೊಳ್ಳಬಹುದು. ಇದಷ್ಟೇ ಅಲ್ಲದೆ ಇನ್ನೂ ಬೇರೆ ತರಹದ ಚಟುವಟಿಕೆಗಳಲ್ಲಿ ನಿಮಗೆ ಕಾರ್ಯನಿರ್ವಹಿಸಲಿ ಬೇಕಿದ್ದರೆ ನೀವು ಸಾಂದಾಜು ಮೂರು ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದು.
ಇದರಲ್ಲಿ ಸುಮಾರು ಒಂದು ಪಾಯಿಂಟ್ ಐದು ಲಕ್ಷ ಗಳನ್ನು ನೀವು ಯಾವುದೇ ತರಹದ ಕೋಲಾಟರಲ್ ಅಥವಾ ಗ್ಯಾರಂಟಿ ನೀಡದೆ ಹಣ ತೆಗೆದುಕೊಳ್ಳಬಹುದು. ರೈತನ ಏಳಿಗೆಗೆ ಎಂದು ಮಾಡಿದ ಈ ಯೋಜನೆಯು ಕೇವಲ ರೈತನಿಗೆ ನಾಲ್ಕು ಪರ್ಸೆಂಟ್ ಬಡ್ಡಿ ದರವನ್ನು ಮಾತ್ರ ಚಾರ್ಜ್ ಮಾಡುತ್ತದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಹೇಗೆ ಸಲ್ಲಿಸಬೇಕು ?
ಈ ಕಾಡಿಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಮೊದಲಿಗೆ ನಿಮ್ಮ ಹತ್ತಿರದ ಬ್ಯಾಂಕ್ಗೆ ಭೇಟಿ ನೀಡಬೇಕು, ನಂತರ ಸಂಬಂಧಪಟ್ಟಂತ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ಹಾಗೂ ಅರ್ಜಿ ಪ್ರಮಾಣ ಪತ್ರವನ್ನು ತೆಗೆದುಕೊಂಡು,
ಅರ್ಜಿಯನ್ನು ತುಂಬಿ ನೀವು ಬ್ಯಾಂಕಿನ ಮುಖ್ಯ ಅಧಿಕಾರಿಗಳಿಗೆ ನೀಡಬೇಕು. ಅದಾದ ನಂತರ ಕೆಲವೇ ದಿನಗಳಲ್ಲಿ ನಿಮಗೆ ನಿಮ್ಮ ಕೈಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡನ್ನು ನೀಡಲಾಗುವುದು.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾದ ಎಲ್ಲ ದಾಖಲಾತಿಗಳು.
1) ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ಪ್ರಮಾಣ ಪತ್ರ
2) ಅರ್ಜಿದಾರ ನಾ ಆಧಾರ್ ಕಾರ್ಡ್
3) ಅರ್ಜಿದಾರರ ಪ್ಯಾನ್ ಕಾರ್ಡ್
4) ಹೊಲದ ಸಂಬಂಧಿಸಿದ ಎಲ್ಲ ದಾಖಲಾತಿಗಳು
5) ಪಶುಗಳ ಆರೋಗ್ಯ ಪ್ರಮಾಣ ಪತ್ರ
6) ಬ್ಯಾಂಕ್ ಖಾತೆಯ ಪಾಸ್ ಬುಕ್
7) ಅರ್ಜಿದಾರರ ಎರಡು ಫೋಟೋ ಕಾಪಿ
8) ಅರ್ಜಿದಾರರ ವೋಟರ್ ಐಡಿ.
ಯೋಜನೆಯ ಮುಖಾಂತರ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ಮೊದಲನೆಯದಾಗಿ
ಮೀನುಗಾರಿಕೆಗೆ ಸಹಾಯಧನ ನೀಡುತ್ತಾರೆ ಅದರಲ್ಲಿ ಅರ್ಹತೆ ಹೊಂದಲು ನೀವು ಸ್ವಸಹಾಯ ಗುಂಪುಗಳಾಗಿರಬೇಕು
ಅಥವಾ ಮೀನು ಕೃಷಿಕರು ಅಂದರೆ ವೈಯಕ್ತಿಕವಾಗಿ ಮೀನು ಕೃಷಿ ಮಾಡುವವರು ಪಾಲುದಾರರು, ಮತ್ತು ಶೇರು ಬೆಳೆಗಾರರು. ಜಂಟಿ ಹೊಣೆಗಾರಿಕೆ ಗುಂಪುಗಳು
ಫಲಾನುಭವಿಯು ಟ್ಯಾಂಕ್, ಕೊಳ, ರೇಸ್‌ವೇ, ತೆರೆದ ಜಲಮೂಲಗಳು, ಸಾಕಣೆ ಘಟಕ ಮತ್ತು ಮೊಟ್ಟೆಕೇಂದ್ರದಂತಹ ಯಾವುದೇ ಮೀನುಗಾರಿಕೆ-ಸಂಬಂಧಿತ ಚಟುವಟಿಕೆಗಳನ್ನು ಗುತ್ತಿಗೆ ಅಥವಾ ಮಾಲೀಕತ್ವವನ್ನು ಹೊಂದಿರಬೇಕು.
ಎಂಬುದನ್ನು ಎಲ್ಲ ರೈತರು ದಯವಿಟ್ಟು ತಿಳಿಯಬೇಕು. ಯಾವುದೇ ನೀರಿನ ಮೂಲ ಹೊಂದಿರದಿದ್ದಲ್ಲಿ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ.
- ಅವನು ಅಥವಾ ಅವಳು ಮೀನು ಸಾಕಾಣಿಕೆ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪರವಾನಗಿ ಹೊಂದಿರಬೇಕು.
3) ಕೋಳಿ ಮತ್ತು ಸಣ್ಣ ಮೆಲುಕು ಹಾಕುವ ಪ್ರಾಣಿ ಸಾಕಾಣಿಕೆಗೆ ಕೂಡ ಸಹಾಯದಾನ ನೀಡಲಾಗುತ್ತದೆ ಇದರಲ್ಲಿ, ವೈಯಕ್ತಿಕ ಕೋಳಿ ಸಾಕಾಣಿಕೆದಾರರು ಹಾಗೂ.
ಜಂಟಿ ಅಥವಾ ಪಾರ್ಟ್ನರ್ ಶಿಪ್ ನಲ್ಲಿ ಕೋಳಿ ಸಾಕಾಣಿಕೆ ಬಿಸಿನೆಸ್ ಮಾಡುವವರು, ಸುಸ್ವ ಸಹಾಯ ಗುಂಪುಗಳು ಹೀಗೆ ನಾನಾ ತರಹದ ಗುಂಪುಗಳಿಗೆ ಸಹಾಯ ನೀಡಲಾಗುತ್ತದೆ.
ಡೈರಿ ಉತ್ಪಾದನೆಗೆ ಕೂಡ ಸಾಲ ಸೌಲಭ್ಯ ಇದೆ.
ರೈತರು ಡೈರಿ ಉತ್ಪನ್ನಗಳನ್ನು ಹೆಚ್ಚಿಸಲು ಹಾಗೂ ರೈತರು (ವೈಯಕ್ತಿಕ ಅಥವಾ ಜಂಟಿ ಸಾಲಗಾರ)
ಜಂಟಿ ಹೊಣೆಗಾರಿಕೆ ಗುಂಪುಗಳು
ಸ್ವಸಹಾಯ ಗುಂಪುಗಳು (ಒಡೆತನದ/ಬಾಡಿಗೆ ಶೆಡ್‌ಗಳನ್ನು ಹೊಂದಿರುವ ಹಿಡುವಳಿದಾರ ರೈತರು ಇದರ ಪ್ರಯೋಜನ ಪಡೆಯಬಹುದು.
ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/Ja3hJcFzohHFqJ4tZtyDMt