hydrophonics ಮಣ್ಣು ರಹಿತ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ

Spread the love

WhatsApp Group Join Now

ಆತ್ಮೀಯ ರೈತ ಬಾಂಧವರಿಗೆ   ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ನಿಮ್ಮೆಲ್ಲರಿಗೂ ನಮಸ್ಕಾರಗಳು.  ಸ್ನೇಹಿತರೆ ಈ ವೆಬ್ಸೈಟ್ ಮೂಲಕ ನಾವು ಪ್ರತಿದಿನವೂ  ರೈತ ಬಾಂಧವರಿಗೆ ಉಪಯುಕ್ತ ವಾಗುವಂತಹ ಮಾಹಿತಿಯನ್ನು  ( ಕೃಷಿಗೆ ಸಂಬಂಧಿಸಿದ  ಹೊಸ ಯೋಜನೆಗಳು, ಕೃಷಿಗೆ ಸಂಬಂಧಿಸಿದ ದಿನನಿತ್ಯ ಸುದ್ದಿಗಳು ) ನೀಡುತ್ತೇವೆ. ಇಂದಿನ ಲೇಖನದಲ್ಲಿ ನಾವು ನಿಮಗೆ  ಮಣ್ಣು ರಹಿತ ಕೃಷಿ  (  hydrophonics ) ಎಂದರೇನು? ಮತ್ತು ಇದರ ಲಾಭಗಳೇನು ? ಮತ್ತು ಇದು ಹೇಗೆ ಕೆಲಸ ಮಾಡುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ನಾವು ಸಂಪೂರ್ಣವಾದ ಉತ್ತರವನ್ನು ಕೊಡುತ್ತೇವೆ. ಹಾಗಾದರೆ ಬನ್ನಿ ಸ್ನೇಹಿತರೆ  ಈ ಮಣ್ಣು ರಹಿತ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

Thank you for reading this post, don't forget to subscribe!

ಮೊದಲಿಗೆ ನಾವು ಈ  ಮಣ್ಣು ರಹಿತ ಕೃಷಿ ಎಂದರೇನು ( hydrophonics ) ಎಂಬುದನ್ನು ತಿಳಿದುಕೊಳ್ಳೋಣ.
ಖನಿಜ ಪೌಷ್ಟಿಕಾಂಶಗಳು  ಹೊಂದಿರುವ ದ್ರವ್ಯವನ್ನು ಬಳಸಿಕೊಂಡು  ಮಣ್ಣಿಲ್ಲದೆ  ಕೃಷಿಯನ್ನು ಮಾಡುವ ವಿಧಾನಕ್ಕೆ  ಹೈಡ್ರೋಫೋನಿಕ್ಸ್ ಅಥವಾ  ಮಣ್ಣು  ರಹಿತ ಕೃಷಿ ಎಂದು ಕರೆಯುತ್ತಾರೆ.  ಈ ತರಹದ  ಕೃಷಿಯಲ್ಲಿ  ಗೊಬ್ಬರ ಮತ್ತು ಪೋಷಕಾಂಶಗಳನ್ನು  ನೀರಿನ ಮುಖಾಂತರವೇ ನೇರವಾಗಿ ಗಿಡಕ್ಕೆ  ನೀಡುವ ವಿಧಾನವಾಗಿದೆ.

ಇದನ್ನು ಓದಿ Bele parihara payment status 2023-24 ಕೂಡಲೇ ಚೆಕ್ ಮಾಡಿಕೊಳ್ಳಿ.

ಜಲ ರಹಿತ ಕೃಷಿಯಲ್ಲಿ  ದೊಡ್ಡ ಹೆಸರು ಮಾಡಿದ  ಆಮದಾಬಾದ್ ಮೂಲದ ಒಂದು ಅಗ್ರಿಕಲ್ಚರ್ ರಿಲೇಟೆಡ್ ಸ್ಟಾರ್ಟ್ ಅಪ್ ಒಂದು  2020ರಲ್ಲಿ ಶುರು ಮಾಡಿದ್ದು , ಈ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ  ಹೆಸರು ಮಾಡಿದೆ, ಅವರ ಸ್ಟಾರ್ಟಪ್ ಹೆಸರು ರೈಸ್ ಹೈಡ್ರೋಫೋನಿಕ್ಸ್.  ಈ ಅಗ್ರಿಟೆಕ್ ಸ್ಟಾರ್ಟ್ ಅಪ್  ಓನರ್ ಹೆಸರು ತುಷಾರ್ ಅಗರ್ವಾಲ್, ಎಂ ಪಟೇಲ್  ಹಾಗೂ ವಿವೇಕ್ ಶುಕ್ಲ . ಈ ಮೂವರು ಸ್ನೇಹಿತರು  ಈ ರೈಸ್ ಹೈಡ್ರೋಕಾನಿಕ್ ಸನ್ನು  ಅತಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಈ ರೈಸ್ ಹೈಡ್ರೋಫೋನಿಕ್ಸ್ ಕಂಪನಿಯು  ಸಂಪೂರ್ಣವಾಗಿ ಮಣ್ಣು    ರಹಿತ  ಖುಷಿಯನ್ನು ಅಳವಡಿಸಿಕೊಂಡಿದ್ದು, ಸಂಪೂರ್ಣವಾಗಿ  ಆರಂಭದಿಂದ ಹಿಡಿದು ಕೊನೆಯವರೆಗೂ  ಯಾವುದೇ ರೀತಿಯಾದಂತಹ ಮಣ್ಣನ್ನು ಇವರು ಬಳಸುವುದಿಲ್ಲ, ಹಾಗೆ ಇವರು ಹೊರಾಂಗಣ ಹಾಗೂ ಒಳಾಂಗಣ ಹೈಡ್ರೋಫೋನಿಕ್ಸ್ ಅನ್ನು  ಅಭಿವೃದ್ಧಿ ಮಾಡುತ್ತಿದ್ದಾರೆ.

ಹಾಗಾದರೆ ರೈಸ್‌ ಹೈಡ್ರೋಪೋನಿಕ್ಸ್ ಏನು ಮಾಡುತ್ತೆ?

ಮಣ್ಣು ರಹಿತ ಕೃಷಿ ಪ್ರಾರಂಭಿಸಬೇಕೆಂದವರಿಗೆ  ಇವರು ಸಂಪೂರ್ಣವಾಗಿ ಫಾರ್ಮನ್ನು ನಿರ್ಮಿಸಿ ಸಹಾಯ ಮಾಡುತ್ತಾರೆ . ಮತ್ತು ಸ್ಥಾಪಿಸಿದ ಮುಂದಿನ ಒಂದು ವರ್ಷದವರೆಗೆ ಇವರು  ಅವರಿಗೆ ಬೇಕಾದಂತಹ ಎಲ್ಲಾ ಕೃಷಿ ಶಾಸ್ತ್ರ ಹಾಗೂ ನಿರ್ವಹಣೆ ಸೇವೆಗಳನ್ನು ಉಚಿತವಾಗಿ ಒದಗಿಸುತ್ತಾರೆ.  ಇದು ಇವರಿಗೆ ಮಾರ್ಕೆಟಿಂಗ್ ಸಂಬಂಧಿಸಿದ ಹಾಗೆ ಹಾಗೂ ಬ್ರ್ಯಾಂಡ್ ಬಿಲ್ಡ್  ಮಾಡುವುದರಲ್ಲಿ ಸಹಾಯವಾಗುತ್ತದೆ.  ಇದು ಅಷ್ಟೇ ಅಲ್ಲದೆ ಅವರು ಉತ್ಪಾದಿಸಿದ  ಉತ್ಪನ್ನಗಳನ್ನು ಮೊದಲು ಐದರಿಂದ ಆರು ತಿಂಗಳು  ಇವರೇ ಖರೀದಿಸಿ ಅವರಿಗೆ  ಹಣದ ಸಹಾಯ ಕೂಡ ಮಾಡುತ್ತಾರೆ.

ಉತ್ಪನ್ನಗಳ ರಿಟೈಲ್‌ ಮಾರಾಟ!


ಜಲ ಕೃಷಿಯ ಮೂಲಕ  ಬೆಳೆದಂತಹ ಎಲ್ಲಾ ತರಕಾರಿಗಳನ್ನು ಹಾಗೂ ಇತರೆ  ಸಸ್ಯಗಳನ್ನು ರೈಸ್ ಫ್ರೆಶ್  ಡೈರೆಕ್ಟ್ ಫ್ರಮ್ ಫಾರ್ಮ್ಸ್  ಎಂಬ ಬ್ರಾಂಡ್ ಮೂಲಕ ರಿಟೇಲ್ ಆಗಿ ಮಾರಾಟ ಮಾಡಲಾಗುತ್ತದೆ. ರೈಸ್ ಹೈಡ್ರೋಕೋನಿಕ್ ಇವರು ದೊಡ್ಡ ದೊಡ್ಡ ಹೋಟೆಲ್ ಗಳು ಹಾಗೂ ರೆಸಾರ್ಟ್ ಗಳು, ಬಿಗ್ ಬಾಸ್ಕೆಟ್ ಹಾಗೂ ಸೂಪರ್ ಮಾರ್ಕೆಟ್ ಹಾಗೂ ಆಹಾರ ತಯಾರಿಕರಿಗೆ  ಈ ಸಸಿಗಳನ್ನು ಅಥವಾ ತರಕಾರಿಗಳನ್ನು ಮಾರುತ್ತಾರೆ. ಇಷ್ಟೇ ಅಲ್ಲದೆ  ಕೃಷಿ ಮಾರುಕಟ್ಟೆ ಕೇಂದ್ರ ಹಾಗೂ ಆಯುರ್ವೇದ  ಸಂಬಂಧಪಟ್ಟಂತ ಕಂಪನಿಗಳಿಗೂ ಕೂಡ  ಇವುಗಳನ್ನು ಮಾರಾಟ ಮಾಡಲಾಗುತ್ತದೆ.

ಜೊತೆಗೆ ಬಿಗ್‌ ಬಾಸ್ಕೆಟ್, ಸೂಪರ್ ಮಾರ್ಕೆಟ್   ಮತ್ತು ವೇಕೂಲ್‌ನಂತಹ ಚಿಲ್ಲರೆ ವ್ಯಾಪಾರಗಳಿಗೆ  ಕೂಡ ಇವರು  ತರಕಾರಿಗಳನ್ನು  ಮಾರಾಟ ಮಾಡುತ್ತಾರೆ . ಇಂದಿನ ದಿನಕ್ಕೆ ಈ ಒಂದು  ಕಂಪನಿಯು ಸುಮಾರು ಐವತ್ತಕ್ಕೂ ಹೆಚ್ಚು ರೀತಿಯ ತರಕಾರಿ ಅಥವಾ ಇತರೆ ಸಸಿಗಳನ್ನು  ಬೆಳೆಯುತ್ತಾರೆ.

ಈಗಾಗಲೇ ಈ ಮೂರು  ಜನರು ನಡೆಸಿಕೊಂಡು ಬರುವಂತಹ ಕಂಪನಿಯು  ಅಂದಾಜು 35 ಸಾವಿರಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದೆ. ಮತ್ತು ಇವರು 27 ವಿವಿಧ ನಗರಗಳಲ್ಲಿ 40 ಕ್ಕೂ ಹೆಚ್ಚು  ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸಿದೆ. 25 ಲಕ್ಷ ಚದರ್ ಅಡಿಗಳಿಗಿಂತ ಹೆಚ್ಚು ಹೈಡ್ರೋಫೋನಿಕ್ಸ್ ಮತ್ತು ಮಣ್ಣು ರಹಿತ  ಫಾರ್ಮಗಳನ್ನು   ಈಗಾಗಲೇ ಅಭಿವೃದ್ಧಿ ಪಡಿಸಿದ್ದಾರೆ. ಮತ್ತು ಸುಮಾರು 35 ಸಾವಿರಕ್ಕೂ ಹೆಚ್ಚು ರೈತರಿಗೆ, ಶಾಲಾ ವಿದ್ಯಾರ್ಥಿಗಳಿಗೆ , ಕೃಷಿ ಬಗ್ಗೆ ಹೆಚ್ಚು ಉತ್ಸಾಹವುಳ್ಳ ಜನರಿಗೆ , ಕೆಲಸ ಮಾಡುವ ವೃತ್ತಿಪರರಿಗೆ , ಗೃಹಿಣಿಯರಿಗೆ  ಈಗಾಗಲೇ ಇವರು ತರಬೇತಿಯನ್ನು ನೀಡಿದ್ದಾರೆ. ಎಂದು ಈ ಕಂಪನಿಯ ಮಾಲೀಕರು ಹೇಳಿದ್ದಾರೆ

ಹಾಗಾದರೆ ಇಷ್ಟು ದೊಡ್ಡದಾಗಿ ಬೆಳೆದಂತಹ ರೈಸ್ ಹೈಡ್ರೋಫೋನಿಕ್ಸ್ ಕಂಪನಿಯು ಹೇಗೆ ಶುರುವಾಗಿತ್ತು ? ತಿಳಿಯೋಣ ಬನ್ನಿ . ತುಷಾರವರು 2016ರಲ್ಲಿ ತಮ್ಮ ಎಂಬಿಎ ಡಿಗ್ರಿ ಮಾಡುತ್ತಿದ್ದಾಗ  ಅಹಮದಾಬಾದ್ನ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಮೀಟ್ ಪಟೇಲ್ ಅವರನ್ನು ಅವರು  ಭೇಟಿ ನೀಡಿದರು. ರೈತ ಕುಟುಂಬದಲ್ಲಿ ಬೆಳೆದು, ಕೃಷಿಯನ್ನು ಅನುಸರಿಸುತ್ತಾ ಬಂದಂತಹ ಮಿತವರಿಗೆ  ಕೃಷಿಯಲ್ಲಿ ಏನಾದರೂ ಸಾಧನೆ ಮಾಡಲೇಬೇಕೆಂಬ, ಹಠ , ಮತ್ತು ಛಲ  ಬಹಳ ದೃಢವಾಗಿತ್ತು.  ಜಗತ್ತು ಎದುರಿಸುತ್ತಿರುವ ಆಹಾರ ಭದ್ರತೆ, ನೀರಿನ ಕೊರತೆ ಮತ್ತು ಬಂಜರು ಮಣ್ಣು ಮುಂತಾದ ಸಮಸ್ಯೆಗಳನ್ನು ತೆಲೆಯಲ್ಲಿ ಇಟ್ಟುಕೊಂಡು  ಹೈಡ್ರೋಫೋನಿಕ್ಸ್ ಒಂದು  ಇದೆಲ್ಲರ ಉತ್ತರವಾಗಬಹುದು ಎಂದು  ಇವರು ಈ ಕಂಪನಿಯನ್ನು ಶುರು ಮಾಡಿದರು .

ಕಂಪನಿ ಶುರುವಾದ ಮೊದಲ ಎರಡು ವರ್ಷಗಳಲ್ಲಿ ಅವರು ಸ್ವಯಂ ಕಲಿಕೆಗೆ  ಹೆಚ್ಚು ಅಭ್ಯಾಸ ಮತ್ತು ಅನುಷ್ಠಾನವನ್ನು  ಛಾವಣಿಯ ಮೇಲೆ ಮಾಡುವುದಕ್ಕೆ ಹೆಚ್ಚು ಹೊತ್ತು ನೀಡಿದರು. ಇದರಿಂದ ಹೈಡ್ರೋಫೋನಿಕ್ಸ್ ನ  ತಂತ್ರಜ್ಞಾನದ ಸೂಕ್ಷ್ಮತೆ ಮತ್ತು ಅದರ ವಿಭಿನ್ನ  ಅನುಷ್ಠಾನ ಪದ್ಧತಿಗಳನ್ನು ಅರ್ಥಮಾಡಿಕೊಳ್ಳಲು ಇದು ಬಹಳ ಸಹಾಯ ಮಾಡಿತು. ಒಂತರ ದೇಶಾದ್ಯಂತ ಯಾರು ಯಾರು ಈ ಹೈಡ್ರೋಫೋನಿಕ್ಸ್ ಕೃಷಿಯನ್ನು ಮಾಡುತ್ತಿದ್ದಾರೆ ಅವರನ್ನೆಲ್ಲ  ಒಕ್ಕೂಟ ಸಲಾಯಿತು. ನಂತರ ಇವರು ಈ ಎಲ್ಲಾ ರೈತರಿಂದ  ಸಲಹೆಯನ್ನು ಪಡೆದುಕೊಂಡು . ಈ ಸನ್ನಿವೇಶದಲ್ಲಿ ಅವರು ಒಬ್ಬ ಕೃಷಿ ಕ್ಷೇತ್ರದಲ್ಲಿ ನಿಪ್ಪೋಣನಾದ  ವಿವೇಕ್ ಶುಕ್ಲಾರನ್ನು ಭೇಟಿ ನೀಡಿದರು, ನಂತರ ಈ ಮೂರು ಜನ ಸೇರಿಕೊಂಡು ಹೊಸ ಕಂಪನಿಯನ್ನು ತೆರೆದರು ಅದೇ  ರೈಸ್   ಹೈಡ್ರೋಪೋನಿಕ್ಸ್.

ಮಣ್ಣು ರಹಿತ ಕೃಷಿಯ  ಬಳಕೆಗಳು…!


ಇವರು ಎಲ್ಲ ತರಹದ ಹಾಗೂ ಎಲ್ಲ ಪದ್ಧತಿಯ  ಮಣ್ಣು ರಹಿತ ಕೃಷಿ ಅಥವಾ ಹೈಡ್ರೋಫೋನಿಕ್ಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ನ್ಯೂಟ್ರಿಯೆಂಟ್ ಫಿಲ್ಮ್ ಟೆಕ್ನಿಕ್ (ಎನ್‌ಎಫ್‌ಟಿ), ಡಚ್ ಬಕೆಟ್‌ಗಳು, ಗ್ರೋ ಬ್ಯಾಗ್‌ಗಳು, ಗ್ರೋ ಸ್ಲ್ಯಾಬ್‌ಗಳು, ತೊಟ್ಟಿ, ಒಳಾಂಗಣ ಲಂಬ ಕೃಷಿ, ಬಹು-ಪದರದ ಕೃಷಿ ಮುಂತಾದವುಗಳನ್ನು  ಇವರು ಮಾಡುತ್ತಾ ಬಂದಿದ್ದಾರೆ. ಮಧ್ಯಮ-ಕಡಿಮೆ ವಿಧಾನವು ಮರುಬಳಕೆಯ ಪರಿಕಲ್ಪನೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಪೌಷ್ಟಿಕಾಂಶದ ಸಮೃದ್ಧವಾದ ನೀರು ನಿರಂತರವಾಗಿ ಹರಿಯುತ್ತದೆ” ಎಂದು ಮೀತ್ ವಿವರಿಸುತ್ತಾರೆ.

ಇದರಲ್ಲಿ ಪೋಷಕಾಂಶಗಳು  ಹೊಂದಿದ ನೀರು ಒಂದು ಬದಿಯಿಂದ ಮತ್ತೊಂದು ಬದಿಗೆ  ನಡೆಯುವಂತೆ ಒಂದು ಪೈಪ್ ಅನ್ನು ನೀಡಲಾಗುತ್ತದೆ. ಅದು ನಂತರ ಮುಖ್ಯ ಕೆಲಸದ  ಜಾಗಕ್ಕೆ ಹಿಂತಿರುಗುತ್ತದೆ. ಹೀಗೆ ಆ ನೀರು ಮತ್ತೆ ಪುನಃ ಮರುಬಳಕೆ ಆಗುತ್ತದೆ. ಕಡಿಮೆ ನೀರಿನಲ್ಲಿ  ಅತಿ ಹೆಚ್ಚು ಲಾಭ ಪಡೆಯಬಹುದು.

ಮಣ್ಣುರಹಿತ ಜಲಕೃಷಿಯ ಪ್ರಯೋಜನಗಳು ಏನು?


ಈ ಒಂದು ಕೃಷಿಯ ಭಾಗವು  ನೀರಿನ ಉಳಿತಾಯದಲ್ಲಿ ಬಹಳ ಪರಿಣಾಮಕಾರಿಯಾಗಿದ್ದು, ಸಾಮಾನ್ಯವಾಗಿ ನಡೆಯುತ್ತಾ ಬರುತ್ತಿರುವ ಕೃಷಿ ವಿಧಾನಗಳಿಗೆ ಹೋಲಿಸಿದರೆ ಇದು 80% ನಷ್ಟು  ನೀರನ್ನು ಉಳಿಸುತ್ತದೆ ಹಾಗೂ  ಸುಮಾರು 85% ಕಡಿಮೆ ಭೂಮಿಯನ್ನು ಬೆಳೆಸುತ್ತದೆ.

ಇದಲ್ಲದೆ ಉತ್ಪಾದನಾ ದರವನ್ನು ಕೂಡ ಸುಮಾರು ಮೂವತ್ತರಿಂದ 40ರಷ್ಟು  ಕಡಿಮೆ ಮಾಡುತ್ತದೆ ಹಾಗೂ  20 ರಿಂದ 50 ಪರ್ಸೆಂಟ್ ನಷ್ಟು ಇಳುವರಿಯನ್ನು ಹೆಚ್ಚಿಗೆ ಮಾಡುತ್ತದೆ.

ಕೋಕೋಪೀಟ್ ಅಥವಾ  ತೆಂಗಿನ ಸಿಪ್ಪೆಯಿಂದ ಮಾಡಿದ ಬಹು ಉದ್ದೇಶದ ಬೆಳೆಯುವ ಮಾಧ್ಯಮ ಅಥವಾ ಪರ್ಲೈಟ್ ನಂತಹ ವಿಧಾನವನ್ನು ಅನುಸರಿಸುವಾಗ ಮರುಬಳಕೆಯ ಬದಲಿಗೆ ಹನಿ ನೀರಾವರಿ ವ್ಯವಸ್ಥೆಯನ್ನು ಬಳಸಲಾಗುತ್ತದೆ ಎಂದು ಮೀತ್  ಅವರು ವಿವರಣೆ ನೀಡಿದರು.

ಸಾಮಾನ್ಯವಾಗಿ ನೀವು ಇದರಲ್ಲಿ ಟೊಮ್ಯಾಟೋ ಕ್ಯಾಪ್ಸಿಕಂ, ಅಥವಾ ಇದ್ದರೆ ಬಳ್ಳಿಗಳನ್ನು  ಬೆಳೆಯಬಹುದು ಮತ್ತು ನಾವು ಕೋಕೋ ಪೀಟ್ ಆಧಾರಿತ ವ್ಯವಸ್ಥೆಯೊಂದಿಗೆ ಹೋಗಲು ಕೂಡ ಸಲಹೆ ನೀಡುತ್ತೇವೆ  ಏಕೆಂದರೆ ಬೇರು ಕೊಳೆತು ಅಥವಾ ರೋಗ ಹರಡುವ ಸಾಧ್ಯತೆಗಳು ಇದರಿಂದ ಕಡಿಮೆಯಾಗುತ್ತದೆ. ಎಂದು ಅವರು ವಿವರಿಸಿದರು

ಜಲಕೃಷಿ ಫಾರ್ಮ್‌ಗಳನ್ನು ಸ್ಥಾಪಿಸುವ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.

1) ಸ್ಥಳೀಯ ಮಾರುಕಟ್ಟೆ ಸಂಶೋಧನೆ:
ನೀವು ಈ ಏರಿಯಾದಲ್ಲಿ ಯಾವ ಬೆಲೆಗಳನ್ನು ಬೆಳೆಯಬಹುದು ಮತ್ತು ಯಾವ ಬೆಲೆಗಳಿಗೆ ಮಾರುಕಟ್ಟೆಯಲ್ಲಿ ಅತಿಯಾಗಿ  ಹೆಚ್ಚಿನ  ದರ ಸಿಗಬಹುದು. ಇಂತಹ ಮಾಹಿತಿಗಳನ್ನು ಮೊದಲೇ ತಿಳಿದುಕೊಳ್ಳಬೇಕಾಗುತ್ತದೆ. ಅದಾದ ನಂತರ ಸ್ಥಳೀಯ ಹವಾಮಾನದ ವರದಿಯನ್ನು ನೋಡಿಕೊಂಡು ಮತ್ತು ಅದರ ಅನುಗುಣವಾಗಿ ಸೂಕ್ತವಾದ ಸಸಿಯನ್ನು ಬೆಳವಣಿಗೆಗೆ ಆಯ್ಕೆ ಮಾಡಬೇಕು .  ರೈಸ್ ಹೈಡ್ರೋಪೋನಿಕ್ಸ್‌ನಿಂದ ನೇಮಕಗೊಂಡ ಸಿವಿಲ್ ಇಂಜಿನಿಯರ್‌ಗಳ ತಂಡವು ಕ್ಲೈಂಟ್‌ನ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸುತ್ತದೆ.

2) ಪ್ರಾಜೆಕ್ಟ್ ಡೆವಲಪ್‌ಮೆಂಟ್:
ಮೇಲೆ ಕಂಡಂತ ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ  ನಾವುಗಳು ಮುಂದಿನ ಹಂತಕ್ಕೆ ಭೇಟಿ ನೀಡುತ್ತೇವೆ  ಅಂದರೆ ಅದು ಪ್ರಾಜೆಕ್ಟ್ ಡೆವಲಪ್ಮೆಂಟ್ ಅಥವಾ ಯೋಜನೆ ಅಭಿವೃದ್ಧಿ ಇಲ್ಲಿ ಫಾರ್ಮುಗಾಗಿ ಎಲ್ಲ ವಸ್ತುಗಳನ್ನು ಮೊದಲು ತಮ್ಮ ತಮ್ಮ ಕಾರ್ಖಾನೆಯಲ್ಲಿ ಖರೀದಿಸಲಾಗುತ್ತದೆ. ನಂತರ ಕಂಪನಿಯ ಇಂಜಿನಿಯರ್ಗಳು ಕಾರ್ಮಿಕರು ತಮ್ಮ ತಮ್ಮ ತಂಡದೊಂದಿಗೆ  ಎಲ್ಲಾ ಹೈಡ್ರೋಕಾನಿಕ್ ಸೈಟ್ ಗಳಿಗೆ ತೆರಳುತ್ತಾರೆ. ಇವರು ನಿಮ್ಮ ಸಂಪೂರ್ಣ ಯೋಜನೆಯ ಅಭಿವೃದ್ಧಿಯನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ನೋಡಿಕೊಂಡು ಹೋಗುತ್ತಾರೆ.

ಹಾಗಾದರೆ ಈ ಕೋರ್ಸ್ ನ ತರಬೇತಿಯನ್ನು ಹೇಗೆ ಪಡೆಯಬಹುದು?


ನೀವು ಈ ಕೋರ್ಸ್ ನನ್ನು ಆನ್ಲೈನ್ ಮುಖಾಂತರ ಕೂಡ ತರಬೇತಿಯನ್ನು ಪಡೆಯಬಹುದು. ರೈತರು ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಕೂಡ ಈ ಕೋರ್ಸನ್ನು  ಮಾಡಬಹುದು. ಹಾಗೆ ತಮ್ಮದಾದಂತಹ  ಒಂದು ಅತಿ ಉತ್ತಮವಾದಂತ ಲಾಭದಾಯಕ ಫಾರ್ಮ್ ಅನ್ನು ನಡೆಸಿಕೊಂಡು ಹೋಗಬಹುದು.
ರೈಸ್ ಹೈಡ್ರೋಫೋನಿಕ್ಸ್ ನ ಮಾಲಿಕ  ನಾವು ಈಗಾಗಲೇ ಆನ್ಲೈನ್ ತರಬೇತಿಯನ್ನು ನೀಡುತ್ತಿದ್ದು, ಅತಿ ಶೀಘ್ರವೇ ಆಫ್ಲ್ಯಾಂಡ್ ತರಬೇತಿಯನ್ನು ಕೂಡ ಶುರು ಮಾಡಲಿದ್ದೇವೆ ಎಂದು ವಿವರಣೆ ನೀಡಿದ್ದಾರೆ. ನೀವು ಈ ಕೋರ್ಸನ್ನು ಪಡೆಯಬೇಕೆಂದರೆ ಯಾವಾಗ ಬೇಕಾದರೂ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಯಶಸ್ಸಿಗೆ ಯಾವುದೇ ತರಹದ  ಜಾತಿ ಮತ ಹಾಗೂ  ವಯಸ್ಸು ಸಂಬಂಧ ಪಡುವುದಿಲ್ಲ, ಕೇವಲ ಛಲ ಹಾಗೂ ಕಠಿಣ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟ ಈ ಮೂರು  ಯುವಕರಿಗೆ ಒಂದು ದೊಡ್ಡ ನಮನ.

ಇದೇ ರೀತಿ ಕೃಷಿಯಲ್ಲಿ ಯಶಸ್ವಿ ಆದಂತಹ  ಅನೇಕ ಯಶಸ್ವಿ ಜನಗಳ ಯಶೋಗಾಥೆಯನ್ನು  ತಿಳಿಯಲು, ಹಾಗೂ ದಿನನಿತ್ಯ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.https://chat.whatsapp.com/FGKCfZf2urJBxpBGFq3FTu


Spread the love
WhatsApp Group Join Now