ಪ್ರಿಯ ರೈತ ಬಾಂಧವರಿಗೆ ಅಧಿಕೃತ ವೆಬ್ಸೈಟ್ ಕೃಷಿ ವಿಚಾರ ಯಿಂದ ತಮ್ಮೆಲ್ಲರಿಗೂ ನಮಸ್ಕಾರಗಳು, ಇಂದಿನ ಲೇಖನದಲ್ಲಿ ನಾವು, ಕರ್ನಾಟಕ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು ? ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ಕಾಗದ ಪತ್ರಗಳು ? ನೀವು ಈಗಾಗಲೇ ಹಣ ಪಡೆದಿದ್ದರೆ ಮುಂದಿನ ಹಣ ಯಾವಾಗ ಬರುತ್ತದೆ ? ನೀವು ಇನ್ನೂ ಅರ್ಜಿ ಸಲ್ಲಿಸದೇ ಇದ್ದರೆ ಏನು ಮಾಡಬೇಕು? ರೇಷನ್ ಕಾರ್ಡ್ ಮಾಡಿಸಲು ಕೊನೆಯ ದಿನಾಂಕ ಏನು ? ಎಲ್ಲವನ್ನು ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ.
ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರವು ಈಗಾಗಲೇ , ಜನರ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ, ರಾಜ್ಯ ಸರಕಾರವು ಕೂಡ , ರೈತನ ಹಿತಕ್ಕಾಗಿ , ಕೃಷಿ ಭಾಗ್ಯ , ಗಂಗಾ ಕಲ್ಯಾಣ , ಸಿರಿಧಾನ್ಯ ಯೋಜನೆ , ಹೀಗೆ ನಾನಾ ತರಹದ ಯೋಜನೆಗಳನ್ನು ಜಾರಿಗೆ ತಂದಿದೆ , ಇದರಲ್ಲಿ ಒಂದಾದಂತ ಗೃಹಲಕ್ಷ್ಮಿ ಯೋಜನೆ , ಎಲ್ಲಾ ಮನೆಯ ಯಜಮಾನತೆಗೆ ಆರ್ಥಿಕವಾಗಿ ಸಹಾಯ ಮಾಡುವುದು , ಈ ಯೋಜನೆಯ ಮುಖ್ಯ ಕೆಲಸವಾಗಿದೆ.
ಗೃಹಲಕ್ಷ್ಮಿ ಯೋಜನೆ…!
ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದಂತ ಈ ಯೋಜನೆಯ , ಎಲ್ಲ ಮನೆಯ ಯಜಮಾನತೆಗೆ ತಿಂಗಳಿಗೆ 2000 ರೂಪಾಯಿಗಳಂತೆ , ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವ ಯೋಜನೆಯಾಗಿದ್ದು, ಸಿದ್ದರಾಮಯ್ಯ ರವರು ಐದು ತಿಂಗಳ ಹಿಂದೆ ಈ ಯೋಜನೆಯನ್ನು ಜಾರಿಗೆ ತಂದಿದ್ದು , ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ.
ಸರಕಾರವು ಈಗ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಈ ನಿಯಮದ ಪ್ರಕಾರ ನೀವು ಇನ್ನೂವರೆಗೆ ಇ – ಕೆವೈಸಿ, ಮಾಡಿಸದೇ ಇದ್ದರೆ ನಿಮಗೆ ಇನ್ನು ಮುಂದೆ ಹಣ ಬರುವುದಿಲ್ಲ.
ಹೌದು ಈ ನಿಯಮದ ಪ್ರಕಾರ ನೀವು ಕಡ್ಡಾಯವಾಗಿ ಇ – ಕೆವೈಸಿ, ಮಾಡಿಸಲೇ ಬೇಕಾಗುತ್ತದೆ . ನೀವು ಕೂಡಲೇ ನಿಮ್ಮ ಆಧಾರ್ ಕಾರ್ಡ್ ಹಾಗೂ ಅದಕ್ಕೆ ಲಿಂಕ್ ಇರುವ ಮೊಬೈಲ್ ಅನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡಬೇಕು.
ಮತ್ತು ಇ – ಕೆವೈಸಿ ಮಾಡಿಸಿಕೊಳ್ಳಬೇಕು.
ಈ ಸೇವೆಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಕೂಡ ಮಾಡಿಕೊಳ್ಳಬಹುದು. ಹಾಗೂ ಇತರೆ ಕಂಪ್ಯೂಟರ್ ಸೆಂಟರ್, ಗ್ರಾಮ ಒನ್ ಸೆಂಟರ್ , ಹಾಗೂ ಸೇವಾ ಸಿಂಧು ಪೋರ್ಟಲ್ ನಲ್ಲಿ ಕೂಡ ಮಾಡಿಕೊಳ್ಳಬಹುದು..
ಇನ್ನೂವರೆಗೂ ಯಾರು ಅರ್ಜಿ ಸಲ್ಲಿಸಿಲ್ಲ ಕೂಡಲೇ ಈ ಕೆಲಸ ಮಾಡಿ.( ಗೃಹಲಕ್ಷ್ಮಿ )
ಅರ್ಜಿ ಸಲ್ಲಿಸಲು APL ಅಥವಾ BPL ಕಾರ್ಡ್ ಕಡ್ಡಾಯವಾಗಿ ಬೇಕಾಗಿದ್ದು , ಈ ಕಾರ್ಡ್ ಗಳು ಇಲ್ಲದಿದ್ದರೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. BPL ಕಾರ್ಡ್ ಗೆ ಅರ್ಜಿ ಸಲ್ಲಿಸಲು ನಿಮ್ಮ, income 2 ಲಕ್ಷ ರೂಪಾಯಿ ಒಳಗೆ ಇರಬೇಕು. ಈಗಾಗಲೇ ಬಿಪಿಎಲ್ ಕಾರ್ಡ್ಗಳನ್ನು ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಕೂಡಲೇ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ನೀವು ಇನ್ನೂ ಅರ್ಜಿ ಸಲ್ಲಿಸಿದೆ ಇದ್ದರೆ NPCI ಮ್ಯಾಪಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ. ಇದು ಕೇವಲ ಒಂದು ಕಂತಿನ ಹಣ ಪಡೆದೆ ಇದ್ದ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ ನಾಲ್ಕು ಅಥವಾ ಐದು ಕಂತಿನ ಹಣ ಪಡೆದ ಮಹಿಳೆಯರಿಗೆ ಇದು ಅನ್ವಯವಾಗುವುದಿಲ್ಲ. ಈ ಸೇವೆಯನ್ನು ಪಡೆಯಲು ನೀವು ನಿಮ್ಮ ಹತ್ತಿರದ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ.
ಬ್ಯಾಂಕ್ ಖಾತೆಯಲ್ಲಿ ತೊಂದರೆ ..!
ಕೆಲವೊಬ್ಬರು ಈಗಾಗಲೇ ಅರ್ಜಿ ಸಲ್ಲಿಸಿದ್ದು , ಹಣ ಎನ್ನು ಖಾತೆಗೆ ಜಮಾ ಆಗದಿದ್ದರೆ , ಒಮ್ಮೆ ನಿಮ್ಮ ಬ್ಯಾಂಕ್ ಗೆ ಹೋಗಿ ಭೇಟಿ ನೀಡಿ . ಮತ್ತು ನಿಮ್ಮ ಖಾತೆಯನ್ನು ಒಮ್ಮೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆಯೋ ಇಲ್ಲವೋ ನೋಡಿಕೊಳ್ಳಿ. ಮತ್ತು ಅಕೌಂಟ್ ಚಲತೆಯಲ್ಲಿ ಇದೆಯೋ ಇಲ್ಲವೋ? ಎಂಬುದನ್ನು ತಿಳಿದುಕೊಳ್ಳಿ.ಕರ್ನಾಟಕ ಸರಕಾರ ಈಗಾಗಲೇ ಈ ಯೋಜನೆಗೆ ಜಾರಿಗೆ ನೀಡಿದ್ದು, ಎಲ್ಲಾ ಫಲಾನುಭವಿಗಳಿಗೆ ಈಗಾಗಲೇ ಐದರಿಂದ ಆರು ಕಂತಿನ ಹಣವನ್ನು ಜಮಾ ಮಾಡಿದೆ. ಮತ್ತು ಇನ್ನೂ ಈ ಯೋಜನೆಗೆ ಅರ್ಜಿ ಸಲ್ಲಿಸದೆ ಇದ್ದರೆ, ಕೂಡಲೇ ಈ ಕೆಲಸ ಮಾಡಿ.
ಹೊಸ ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲಾತಿಗಳು .
ಅರ್ಜಿದಾರರ ಆಧಾರ್ ಕಾರ್ಡ್
APL ಅಥವಾ BPL ಕಾರ್ಡ್.
ಅರ್ಜಿದಾರರ ಪಾಸ್ ಬುಕ್
2 ಫೋಟೋ.
ಈ ಮೇಲ್ಕಂಡ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು , ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಗಳಲ್ಲಿ ( ಸೇವಾ ಸಿಂಧು ಪೋರ್ಟಲ್ , ಗ್ರಾಮ ಒನ್ ಸೆಂಟರ್, ಅಥವಾ ಇತರೆ ಕಂಪ್ಯೂಟರ್ ಸೆಂಟರ್ ಗಳಲ್ಲಿ ಕೂಡ ನೀವು ಇದನ್ನು ಮಾಡಿಸಿಕೊಳ್ಳಬಹುದು.
ನೀವು ಈ ಯೋಜನೆಯನ್ನು ನಿಮ್ಮ ಮೊಬೈಲ್ ನಲ್ಲಿ ಕೂಡ ಕೇವಲ ಐದು ನಿಮಿಷಗಳಲ್ಲಿ ಅರ್ಜಿ ಸಲ್ಲಿಸಬಹುದು, ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಗೆ ನೀವು ಲಾಗಿನ್ ಆಗಬೇಕು.
https://sevasindhuservices.karnataka.gov.in/
ನಂತರ ಅಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಆಯ್ದುಕೊಂಡು , ಅವರು ಕೇಳುವ ಎಲ್ಲ ಮಾಹಿತಿಯನ್ನು ನೀಡಿ otp ಯನ್ನು ಸಲ್ಲಿಸಿ, ಅರ್ಜಿಯನ್ನು ನೀಡಬೇಕು.
ಪಡಿತರ ಚೀಟಿಯಲ್ಲಿ ಅತ್ತೆಯು ಯಜಮಾನಿಯಾಗಿದ್ದು ಮತ್ತು ಸೊಸೆಯು ಪಡಿತರ ಚೀಟಿಯಲ್ಲಿ ಸದಸ್ಯರಾಗಿದ್ದರೆ , ಕೇವಲ ಅತ್ತಿಗೆ ಮಾತ್ರ ಈ ಹಣ ಜಮವಾಗುತ್ತದೆ. ಸೊಸೆಗೆ ಯಾವುದೇ ರೀತಿಯಾದಂತಹ ಹಣ ಸಿಗುವುದಿಲ್ಲ , ಮತ್ತು ಅವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಕುಟುಂಬದ ಯಜಮಾನತೆಯು ಮರಣ ಹೊಂದಿದ್ದರೆ ಏನು ಮಾಡಬೇಕು ? ( ಗೃಹಲಕ್ಷ್ಮಿ )
ನೀವು ಕೂಡಲೇ ಅವರ ಮರಣ ಉತಾರ, ಆಧಾರ್ ಕಾರ್ಡ್ ಹಾಗೂ ಇತರೆ ಬೇಕಾಗುವ ದಾಖಲಾತಿಗಳನ್ನು ತೆಗೆದುಕೊಂಡು ಕೂಡಲೇ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕು. ಮತ್ತು ತಿದ್ದುಪಡೆಯ ಅರ್ಜಿಯನ್ನು ಸಲ್ಲಿಸಬೇಕು.
ಈ ಅರ್ಜಿ ಸಲ್ಲಿಸಲು ಹಣ ತುಂಬಬೇಕೆ?ಸರಕಾರವು ಈ ಯೋಜನೆಯ ಎಲ್ಲರ ಹಿತಕ್ಕಾಗಿ ಜಾರಿಗೆ ತಂದಿದ್ದು, fee ಮುಖಾಂತರ ಯಾವುದೇ ತರಹದ ಹಣವನ್ನು ಕೇಳುವುದಿಲ್ಲ. ನೀವು ಕೇವಲ ಅರ್ಜಿ ಸಲ್ಲಿಸಲು ತೆಗೆದುಕೊಳ್ಳುವಂತಹ ಸೇವಾ ಸಿಂಧು ಪೋರ್ಟಲ ನ ಕರ್ಮಚಾರಿಗೆ ಅವನ fee ಕೊಡಬೇಕು.
ಇದನ್ನು ಓದಿ ಸಾವಯುವ ಕೃಷಿ ಪದ್ಧತಿಯಿಂದ ರೈತನಿಗೆ ಆಗುವ ಲಾಭ
ಹಾಗಾದರೆ ಫಲಾನುಭವಿಗಳು ಈ ಹಣವನ್ನು ಹೇಗೆ ಪಡೆಯಬಹುದು??ಈ ಹಣವು ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ ಡೈರೆಕ್ಟ್ ಆಗಿ ಕ್ರೆಡಿಟ್ ಆಗಲಿದೆ , ಪ್ರತಿ ತಿಂಗಳು 2000 ರೂ ಅಂತೇ, (monthly 2000 rs) ಹಂತ ಹಂತವಾಗಿ ಫಲಾನುಭವಿಗಳಿಗೆ ತಲುಪುತ್ತದೆ.
ತಪ್ಪು ಮಾಹಿತಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ , ಫಲಾನುಭವಿಗಳಿಂದ ಸರ್ಕಾರವು ಪ್ರತಿರೂಪಾಯಿಗಳನ್ನು ವಸೂಲಿ ಮಾಡಲಾಗುತ್ತದೆ . ಮತ್ತು ಸರಕಾರವು ಅರ್ಜಿದಾರರ ವಿರುದ್ಧ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
ನಿಮ್ಮ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿ(BPL) ವಿಳಾಸ ಬೇರೆ ಬೇರೆ ಯಾಗಿದ್ದರೆ ನಿಮಗೆ ಹಣ ಜಮಾ ಆಗುತ್ತದೆಯೇ ?
ಈಗಾಗಲೇ ನಿಮ್ಮ ಪಡಿತರ (BPL ) ಚೀಟಿ ಮತ್ತು ಆಧಾರ್ ಕಾರ್ಡ್ ಮೊದಲೇ ಲಿಂಕ್ ಆಗಿರುವ ಕಾರಣ ನಿಮಗೆ ಯಾವುದೇ ಆದಂತ ತೊಂದರೆ ಆಗುವುದಿಲ್ಲ.
ಇದನ್ನು ಓದಿ ಸಾವಯುವ ಕೃಷಿ ಪದ್ಧತಿಯಿಂದ ರೈತನಿಗೆ ಆಗುವ ಲಾಭ
ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರಿದ್ದಾರೆ ಏನು ಮಾಡಬೇಕು?
ನಿಮ್ಮ ಸಮೀಪದ ಸೇವಾ ಸಿಂಧು ಕೇಂದ್ರಕ್ಕೆ ಅಥವಾ ಕರ್ನಾಟಕ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ.
ಇದೇ ರೀತಿಯಾದಂತಹ , ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತ , ಯುವ ನಿಧಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಯುವನಿಧಿ ಸ್ವಯಂ ಘೋಷಣೆ…!
ನೀವು ಈಗಾಗಲೇ ಯೋಜನೆಯಡಿ ಹಣ ಪಡೆಯುತ್ತಿದ್ದರೆ, ಪ್ರತಿ ತಿಂಗಳು ನೀವು ಸ್ವಯಂ ಘೋಷಣೆ ಮಾಡಬೇಕಾಗುತ್ತೆ , ಇಲ್ಲ ಅಂದರೆ ನಿಮಗೆ ಹಣ ಜಮಾ ಆಗುವುದಿಲ್ಲ .
ಸ್ವಯಂ ಘೋಷಣೆ ಮಾಡಲು ನೀವು , ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಬೇಕು, ನಂತರ ಅಲ್ಲಿ ಯುವನಿಧಿ ಸ್ವಯಂ ಘೋಷಣೆ ಮುಖ್ಯ ಪುಟವನ್ನು ತೆರೆದು , ನಿಮ್ಮ ಆಧಾರ್ ಕಾರ್ಡ್ ಹಾಗೂ OTP ನೀಡಿ ಸ್ವಯಂ ಘೋಷಣೆಯನ್ನು ಮಾಡಬೇಕಾಗುತ್ತದೆ.
ನೀವು ಇನ್ನೂ ಈ ಯೋಜನೆಗೆ ಅರ್ಜಿ ಸಲ್ಲಿಸದೇ ಇದ್ದರೆ ಏನು ಮಾಡಬೇಕು.?
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ತುಂಬಾ ಸರಳವಾಗಿದ್ದು, ನಿಮ್ಮ ಮೊಬೈಲ್ ನಲ್ಲಿ ಕೇವಲ ಐದು ನಿಮಿಷಗಳಲ್ಲಿ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಮೊದಲಿಗೆ ನೀವು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕು , ಅಲ್ಲಿ ಇವನಿಗೆ ಯೋಜನೆಯ ಮುಖ್ಯ ಪುಟವನ್ನು ತೆರೆದು , ಮೊದಲಿಗೆ ನೀವು ಆಧಾರ್ ಕಾರ್ಡ್ ಡೀಟೇಲ್ಸ್ ಅನ್ನು ತುಂಬಬೇಕಾಗುತ್ತದೆ. ನಂತರ ಹತ್ತನೇ ತರಗತಿಯ ನೊಂದಣಿ ನಂಬರ್ , 12ನೇ ತರಗತಿಯ ನೋಂದಣಿ, ನೀವು ಕಲಿತ ಅಂತ ಯುನಿವರ್ಸಿಟಿ ಎಲ್ಲವನ್ನು ತುಂಬಿ ಲಾಗಿನ್ ಆಗಿ , otp ಹಾಕಿ ಅಪ್ಲಿಕೇಶನ್ ಸಬ್ಮಿಟ್ ಮಾಡಬೇಕಾಗುತ್ತದೆ.
ಅಪ್ಲಿಕೇಶನ್ ಹಾಕಿದ ಮರು ತಿಂಗಳಿನಿಂದ ನಿಮಗೆ ಹಣ ಜಮಾ ಆಗಲು ಶುರುವಾಗುತ್ತದೆ.ದಿನನಿತ್ಯ ಇದೇ ರೀತಿಯಾದಂತಹ , ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಮತ್ತು ಸರಕಾರದ ಎಲ್ಲ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು, ಕೂಡಲೇ ನಮ್ಮ ವಾಟ್ಸಾಪ್ ಚಾನಲ್ ಅನ್ನು ಸೇರಿಕೊಳ್ಳಿ.