ಪ್ರಿಯ ರೈತ ಬಾಂಧವರಿಗೆ ಕೃಷಿ ವಿಚಾರ ಎಂಬ ಸಾಮಾಜಿಕ ಜಾಲತಾಣದಿಂದ ನಮಸ್ಕಾರಗಳು. ಭಾರತ ಒಂದು ಕೃಷಿ ಆಧಾರಿತ ದೇಶವಾಗಿದ್ದು , ಸುಮಾರು 50ರಿಂದ 60 ಪರ್ಸೆಂಟ್ ನಷ್ಟು ಜನ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ, ಮತ್ತು ಕೃಷಿಯು ಭಾರತದ ಆರ್ಥಿಕತೆಯಲ್ಲಿ ಬಹು ಮುಖ್ಯ ಪಾತ್ರವನ್ನು ಅನುಸರಿಸುತ್ತದೆ. ಖುಷಿಯ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಇದೆ ಎಂದರೆ ತಪ್ಪಾಗುವುದಿಲ್ಲ. ಆದರೆ ರೈತನ ಪಾಡು ಇಂದಿನ ದಿನ ಕೂಡ ಕಷ್ಟಕರದಲ್ಲಿಯೇ ಇದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರವು ರೈತನ ಆರ್ಥಿಕತೆಯಲ್ಲಿ ಸಹಾಯ ಮಾಡಲೆಂದು ನಾನಾ ತರಹದ ಯೋಜನೆಗಳನ್ನು ತರುತ್ತಲೇ ಬಂದಿದೆ. ಇದರಲ್ಲಿ ಒಂದಾದದ್ದು ಪ್ರಧಾನಮಂತ್ರಿ ಆವಾಸ ಯೋಜನೆ. ಏನಿದು ಪ್ರಧಾನಮಂತ್ರಿ ಆವಾಸ ಯೋಜನೆ ? ಇದರಿಂದ ಸಾಮಾನ್ಯ ಜನಕ್ಕೆ ಹೇಗೆ ಸಹಾಯವಾಗುತ್ತದೆ ? ಅರ್ಜಿ ಹೇಗೆ ಸಲ್ಲಿಸಬೇಕು ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಭಾರತ ಸರಕಾರವು ಒಂದು ಮಹತ್ವಕಾಂಕ್ಷಿ ಯೋಜನೆಯನ್ನಾಗಿ 2015 ರಲ್ಲಿ ಜಾರಿಗೆ ತಂದಿತ್ತು. ಯೋಜನೆಯ ಮುಖ್ಯ ಉದ್ದೇಶವೆಂದರೆ ದೇಶದ ಎಲ್ಲ ಬಡವರಿಗೆ b ಮನೆ ಅಥವಾ ಆವಾಸ ನೀಡುವುದು. 2015 ಏಪ್ರಿಲ್ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರಕಾರದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅಂದಾಜು 2022 ರ ಒಳಗಾಗಿ ಎಲ್ಲಾ ಬಡ ಜನರಿಗೆ ಮನೆ ಕಟ್ಟಿಸಿ ಕೊಡುವುದು ಅಥವಾ ಮನೆ ಕಟ್ಟುವುದಕ್ಕೆ ಸಹಾಯಧನ ಒದಗಿಸಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಪ್ರಧಾನಮಂತ್ರಿಯ ನರೇಂದ್ರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಸಿದ್ದಾಂತದ ಅನುಸಾರವಾಗಿ ಈ ಈ ಯೋಜನೆಯು ಕಾರ್ಯನಿರ್ವಹಿಸುತ್ತಾ ಬರುತ್ತಿದ್ದು. ಮುಂದಿನ ದಿನ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುವ ಎಲ್ಲ ಸೂಚನೆಗಳಿವೆ ಎಂದು ಕೂಡ ಸರಕಾರವು ಪ್ರಮಾಣ ನೀಡಿದೆ. ಯೋಜನೆಯು ನಗರ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಬಡ ಜನರಿಗೆ ಮನೆ ನಿರ್ಮಾಣಕ್ಕಾಗಿ ಸರಕಾರದಿಂದ ನೇರ ಹಣಕಾಸನ್ನು ಬಡ ಜನರ ಅಕೌಂಟಿಗೆ ನೇರವಾಗಿ ಜಮಾ ಮಾಡುವಂತಹ ಯೋಜನೆಯಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮುಖ್ಯ ಅಂಶಗಳು
1. ನಗರ ಆವಾಸ್ ಯೋಜನೆ (PMAY-U) ಈ ಯೋಜನೆಯ ಮುಖಾಂತರ ಸುಮಾರು 1.2 ಕೋಟಿಗೆ ಹೆಚ್ಚು ಮನೆಗಳನ್ನು 2022ರ ಒಳಗೆ ನಿರ್ಮಾಣಿಸುವ ಗುರಿ ಹೊಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದಲ್ಲಿ ನೀವು ಕಡ್ಡಾಯವಾಗಿ ಬಿಪಿಎಲ್ ಕಾರ್ಡನ್ನು ಹೊಂದಿರಬೇಕಾಗುತ್ತದೆ ಆಶ್ರಿತ ವರ್ಗದವರು ಮತ್ತು ಅನಾಥ ಮಹಿಳೆಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯ ಮುಖಾಂತರ ಬಡ ಜನರಿಗೆ ಬಡ್ಡಿ ಸಹಾಯಧನ ಎಂದು 6.5% ಬಡ್ಡಿ ಸಹಾಯಧನವನ್ನು 20 ವರ್ಷಗಳ ಅವಧಿಗೆ ನೀಡಲಾಗುತ್ತದೆ.
2. ಪ್ರಧಾನಮಂತ್ರಿ ಮಂತ್ರಿ ಗ್ರಾಮೀಣ ಅವಾಸ್ ಯೋಜನೆಯ ಮುಖ್ಯ ಗುರಿಯನ್ನು ಹೇಳಬೇಕೆಂದರೆ –ಗ್ರಾಮೀಣ ಆವಾಸ್ ಯೋಜನೆ (PMAY-G)
: 2022 ರೊಳಗೆ ಸುಮಾರು 2.95 ಕೋಟಿಗೆ ಹೆಚ್ಚು ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು ಈ ಯೋಜನೆಯ ಮೂಲಕ ಮನೆ ನಿರ್ಮಾಣಕ್ಕೆ ಅಂದಾಜು ₹1.20 ಲಕ್ಷ, ಮತ್ತು ಶೌಚಾಲಯ ನಿರ್ಮಾಣಕ್ಕೆ ಹೆಚ್ಚುವರಿ ₹12,000.
ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
1. ಪ್ರಧಾನಮಂತ್ರಿ ಆವಾಸ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕಾದಲ್ಲಿ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಅಥವಾ ಗ್ರಾಮ ಸೆಂಟರ್ಗೆ ಅಥವಾ ಸೇವಾ ಸಿಂಧು ಸೆಂಟರಿಗೆ ಭೇಟಿ ನೀಡಬೇಕಾಗುತ್ತದೆ. ಹಾಗೂ ಅರ್ಜಿ ಅರ್ಜಿದಾರರು ಪ್ರತ್ಯೇಕ PMAY ವೆಬ್ಸೈಟ್ಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
2. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದಲ್ಲಿ ನೀವು ಆಧಾರ್ ಕಾರ್ಡ್ , ಬ್ಯಾಂಕ್ ಪಾಸ್ ಬುಕ್ , ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್ , ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಮತ್ತು ಭೂ ದಾಖಲೆಯ ಎಲ್ಲಾ ಡಾಕ್ಯುಮೆಂಟ್ಸ್ ಗಳನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರಧಾನಮಂತ್ರಿಯ ಆವಾಸ್ ಯೋಜನೆಯ ಹಂತಗಳು.
1. ಹೆಚ್ಚುವರಿ ಹಣಕಾಸು : ಅನುದಾನದ ಹಣವನ್ನು ಸರಕಾರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
2. ಮನೆ ನಿರ್ಮಾಣದ ಹಂತಗಳು: ಪ್ರಾರಂಭ ಹಂತ, ಮಧ್ಯಂತರ ಹಂತ, ಪೂರ್ಣಗೊಂಡ ಹಂತಗಳನ್ನು ಹೊಂದಿರುತ್ತದೆ.
ಈ ಯೋಜನೆಯ ಲಾಭಗಳು
1. ಬಡವರಿಗೆ ಮನೆ: ಈ ಯೋಜನೆಯ ಪ್ರಾಮುಖ್ಯವಾದ ಗುರಿ ಎಂದರೆ ಬಡವರಿಗೆ ಮನೆಯನ್ನು ಒದಗಿಸಿಕೊಡುವುದು ಮತ್ತು ಇದರ ಮೂಲಕ ಅವರ ಬದುಕಿನ ಗುಣಮಟ್ಟವನ್ನು ಸುಧಾರಿಸುವುದು.
2. ಆರ್ಥಿಕ ಉತ್ಸವ – ಈ ಯೋಜನೆಯ ಮೂಲಕ ಮನೆಯನ್ನು ಹೊಂದಲು ಸರಕಾರ ಬಡ ಜನರಿಗೆ ಸಹಾಯ ಮಾಡುವ ಮೂಲಕ ಬಡವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಾಗುತ್ತದೆ.
3. ಮತ್ತು ಈ ಯೋಜನೆಯ ಮುಖಾಂತರ ಒಂಟಿ ಮಹಿಳೆ , ಮಹಿಳಾ ಸಬಲೀಕರಣ., ಮತ್ತು ಮಾರುಕಟ್ಟೆಯಲ್ಲಿ ಅಸಮರ್ಥರಾಗಿರುವವರು ಸಹ ಯೋಜನೆಯಡಿಯಲ್ಲಿ ಮನೆ ಹೊಂದಲು ಅರ್ಹರಾಗಿದ್ದಾರೆ.
ಪ್ರಧಾನಮಂತ್ರಿಯ ಆವಾಸ್ ಯೋಜನೆ ಸಮೀಕ್ಷೆಗಳು ಮತ್ತು ಅಂಕಿಅಂಶಗಳು
2015 ಏಪ್ರಿಲ್ ಅಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಜಾರಿಗೆ ತಂದಿದ್ದು, 2022 ರೊಳಗೆ 2.95 ಕೋಟಿ ಮನೆಗಳ ಗುರಿಯನ್ನು ಸಾಧಿಸಲು PMAY (ಗ್ರಾಮೀಣ) ಹಾಗೂ 1.2 ಕೋಟಿ ಮನೆಗಳ ಗುರಿಯನ್ನು PMAY (ನಗರ) ಯೋಜನೆ ಹೊಂದಿದೆ. ಈ ಯೋಜನೆಯ ಮುಖ್ಯ ಉದ್ದೇಶಗಳನ್ನು ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಕೂಡ ಸಹಕಾರ ನೀಡುತ್ತವೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಯಶಸ್ಸು
ಈ ಯೋಜನೆಯ 2019 ರ ಡಿಸೆಂಬರ್ ತಿಂಗಳಿನ ಸಮೀಕ್ಷೆ ಪ್ರಕಾರ ಸುಮಾರು 1.5 ಕೋಟಿ ಜನರಿಗೆ ಸರಕಾರವು ಮನೆ ನಿರ್ಮಾಣ ಮಾಡಿ ಕೊಟ್ಟಿದೆ. ಇದು ಗ್ರಾಮೀಣದ ಅಂಕಿ ಅಂಶಗಳಾಗಿದ್ದು ನಗರದಲ್ಲಿ ಅಂದಾಜು ಒಂದು ಕೋಟಿ ಮನೆಗಳನ್ನು ಸರಕಾರ ನಿರ್ಮಾಣ ಮಾಡಿ ಕೊಟ್ಟಿದೆ. ಮತ್ತು ಇನ್ನು ಅಂದಾಜು 60 ರಿಂದ 70ಲಕ್ಷ ಮನೆಗಳು ನಿರ್ಮಾಣ ಆಗಲಿ ಎಂದು ಭರವಸೆ ನೀಡಿದ್ದಾರೆ.
ಕೇಂದ್ರ ಸರಕಾರವು ಪ್ರಮಾಣ ಮಂತ್ರಿ ಆವಾಸ್ ಯೋಜನೆಯ ಯಶಸ್ವಿಗಾಗಿ ಹಗಲು ರಾತ್ರಿ ಅನ್ನದೇ ಕೆಲಸ ಮಾಡಿದ್ದು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಹೊಸ ತಂತ್ರಜ್ಞಾನ ಬಳಿಕೆ ಮಾಡಿದೆ, ವೇಗವಾದ ಅನುಮೋದನೆಗಳನ್ನು ಮತ್ತು ಸಮುದಾಯದ ಭಾಗವಹಿಸಿ ಮುಖ್ಯವಾಗಿ ಪರಿಣಾಮಕಾರಿ ಆಗಿ ಕಾರ್ಯನಿರ್ವಹಿಸಿದೆ.
ಸಮುದಾಯದ ಪಾತ್ರ
ಸಮುದಾಯದ ಎಲ್ಲಾ ವರ್ಗಗಳ ಜನರು ಈ ಯೋಜನೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸಲು, ಬಡವರ ಮನೆ ನಿರ್ಮಾಣಕ್ಕೆ ಸಹಾಯ ಮಾಡುವುದು ಅತ್ಯಂತ ಮುಖ್ಯವಾಗಿದೆ.
ಈ ಯೋಜನೆಗೆ ಪ್ರಾಮುಖ್ಯವಾದ ಸವಾಲುಗಳು ಮತ್ತು ಪರಿಹಾರಗಳು
1. ಮೊದಲನೆಯದಾಗಿ ಭೂಮಿ ಸಮಸ್ಯೆಗಳು ಈ ಸಮಸ್ಯೆಯೂ ಮುಖ್ಯವಾಗಿ ನಗರದ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದು, ನಗರ ಪ್ರದೇಶಗಳಲ್ಲಿ ಭೂಮಿ ಅಂತರವನ್ನು ಇತ್ಯರ್ಥಪಡಿಸುವುದು ಒಂದು ದೊಡ್ಡ ಸವಾಲಾಗಿದೆ.
2. ಮತ್ತೊಂದು ಮುಖ್ಯವಾದ ಸವಾಲು ಎಂದರೆ ಸರಕಾರದ ಹತ್ತಿರ ಹಣಕಾಸಿನ ಕೊರತೆ ಉಂಟಾಗಿದ್ದು. ಮುಂದಿನ ಕಾರ್ಯನಿರ್ವಹಿಸುವುದರಲ್ಲಿ ಸಮಯ ಕಳೆಯಬಹುದು ಎಂದು ಸರಕಾರವು ವಿವರಣೆಯನ್ನು ನೀಡಿದೆ. ಹಣಕಾಸಿನ ಕೊರತೆ ಯೋಜನೆಗೆ ಅಗತ್ಯವಿರುವ ಹಣಕಾಸನ್ನು ಸಂಗ್ರಹಿಸುವುದು ಒಂದು ದೊಡ್ಡ ಸಮಸ್ಯೆಯಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ಅಥವಾ ಮಾನದಂಡಗಳು…
1. ಮೊದಲನೆಯದಾಗಿ ಅರ್ಜಿದಾರರು ಆರ್ಥಿಕ ದೃಷ್ಟಿಯಿಂದ ದುರ್ಬಲ ವರ್ಗದವರಾಗಿರಬೇಕು (EWS) ವರ್ಗದವರಾಗಿರಬೇಕು. ಹೊಲ 5 ಎಕರೆ ಮೇಲೆ ಇರಬಾರದು ಮತ್ತು ಅರ್ಜಿದಾರರ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಆಗಿರಬೇಕು.
ತಗ್ಗಾದ ಮಧ್ಯಮ ಆದಾಯದ ವರ್ಗಗಳು (LIG) ವಾರ್ಷಿಕ ಆದಾಯ ಅಂದಾಜು ₹3 ಲಕ್ಷದಿಂದ ₹6 ಲಕ್ಷದೊಳಗಿರಬೇಕು.
ಮಧ್ಯಮ ಆದಾಯದ ವರ್ಗಗಳು ಅಥವಾ (MIG-I) ವರ್ಗದ ಜನರು ವಾರ್ಷಿಕ ಆದಾಯ ₹6 ಲಕ್ಷದಿಂದ ₹12 ಲಕ್ಷದೊಳಗಿರಬೇಕು.
ಹಾಗೆಯೇ ಮಧ್ಯಮ ಆದಾಯದ ವರ್ಗಗಳು ಅಥವಾ (MIG-II) ವರ್ಗದವರು ವಾರ್ಷಿಕ ಆದಾಯ ₹12 ಲಕ್ಷದಿಂದ ₹18 ಲಕ್ಷದೊಳಗಿರಬೇಕು.
2. ಸಾಮಾಜಿಕ ದೃಷ್ಟಿಯಿಂದ:
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಫಲಾನುಭವಿಗಳ ಆಗಬೇಕೆಂದರೆ ಅರ್ಜಿದಾರರು ಬಿಪಿಎಲ್ ಕುಟುಂಬದವರಾಗಿರಬೇಕು. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು.
ಆಶ್ರಿತ ವರ್ಗಗಳು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಇತರ ಹಿಂದುಳಿದ ವರ್ಗಗಳು (OBC).
ಒಂಟಿ ಮಹಿಳೆಯರು ಅಥವಾ ಬಡಾವಣೆ ಹೊಂದಿಲ್ಲದ ಒಂಟಿ ಮಹಿಳೆಯರು.
ವಿಕಲಚೇತನರು ಅಥವಾ ಬಡಾವಣೆ ಹೊಂದಿಲ್ಲದ ವಿಕಲಚೇತನರು.
3. ಬಡಾವಣೆಯ ದೃಷ್ಟಿಯಿಂದ ಹೇಳಬೇಕೆಂದರೆ
ಅರ್ಜಿದಾರರು ಯಾವುದೇ ಬೇರೆ ತರಹದ ಇತರ ಕೇಂದ್ರ ಅಥವಾ ರಾಜ್ಯ ಸರ್ಕಾರದ ವಸತಿ ಯೋಜನೆಯ ಫಲಾನುಭವಿಗಳಾಗಿರಬಾರದು.
ಅರ್ಜಿದಾರರು ಪ್ರಸ್ತುತವಾಗಿ ಯಾವುದಾದರೂ ತಾತ್ಕಾಲಿಕ ಅಥವಾ ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿರಬೇಕು ಅಥವಾ ವಾಸಿಸುತ್ತಿರಬೇಕು.
ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಯಾವುದೇ ತರಹದ ಮಾಹಿತಿಗಳನ್ನು ಪಡೆಯಲು ಹಾಗೂ ಕೃಷಿಗೆ ಸಂಬಂಧಿಸಿದ ಯಾವುದೇ ತೀರದ ಮಾಹಿತಿಯನ್ನು ತಿಳಿಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಕೃಷಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ನಾವು ಸರಕಾರದ ಎಲ್ಲಾ ಯೋಜನೆಗಳು ಅಂದರೆ ( ಪ್ರಧಾನಮಂತ್ರಿ ಕಿಸಾನ್ ಸನ್ಮಾನ ಯೋಜನೆ , ಫಸಲು ಭೀಮಾ ಯೋಜನೆ , ನರೇಗಾ ಯೋಜನೆ , ಗಂಗಾ ಕಲ್ಯಾಣ ಯೋಜನೆ ಮತ್ತು ಇತರೆ ) ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಇದಷ್ಟೇ ಅಲ್ಲದೆ ಕರ್ನಾಟಕದ 5 ಗ್ಯಾರಂಟಿಗಳಲ್ಲಿ ಯಾವುದೇ ಯೋಜನೆಯ ಬಗ್ಗೆ ಸರಕಾರವು ಹೊಸ ದಾಖಲಾತುಗಳು ಕೇಳಿದ್ದಲ್ಲಿ ಅಥವಾ ಅಪ್ಡೇಟ್ಸ್ ನೀಡಿದ್ದಲ್ಲಿ ನಾವು ಮಾಹಿತಿಯನ್ನು ನಿಮ್ಮಲ್ಲಿ ಶೇರ್ ಮಾಡುತ್ತೇವೆ. ಲೇಖನ ಉಪಯುಕ್ತ ಎನಿಸಿದ್ದಲ್ಲಿ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು.
ಸ್ವಾವಲಂಬಿ ಸಾರಥಿ ಯೋಜನೆ : ಹೆಚ್ಚಿನ ಮಾಹಿತಿಗಾಗಿ ಕೂಡಲೇ ಕೆಳಗಿನ ಲಿಂಕ್ ಅನ್ನು ಒತ್ತಿ https://krushivichara.com/index.php/2024/08/08/swavalambi-sarathi-scheme-complete-information/
ಪಿಎಂ ಕಿಸಾನ್ ಫಲಾನುಭವಿಗಳಿಗೆ ಸರಕಾರದಿಂದ ಗುಡ್ ನ್ಯೂಸ್ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ https://krushivichara.com/index.php/2024/07/06/pm-kisan-samman-nidhi-imp-announcment/
ಕೃಷಿ ರೋಗನಿರ್ವಹಣೆ : ಯಾವ ರೋಗಕ್ಕೆ ಯಾವ ಔಷಧಿ ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/07/05/how-to-control-disese-in-agricultural-crops/
ನಿಮ್ಮ ಹೊಲದಲ್ಲಿ ಈ ಪದ್ಧತಿಯನ್ನು ಬಳಸಿ ಕಳೆ ನಿರ್ವಹಣೆ ಮಾಡಿ https://krushivichara.com/index.php/2024/06/06/know-complete-information-about-weed-eradication-and-types-of-weed-eradication/
ನಿಮ್ಮ ಹೊಲದಲ್ಲಿ ಮಣ್ಣು ಪರೀಕ್ಷೆ ಮಾಡುವ ವಿಧಾನ, ಮಣ್ಣು ಪರೀಕ್ಷೆನೇ ಮಾಡುವುದರಿಂದ ಆಗುವ ಲಾಭಗಳು https://krushivichara.com/index.php/2024/05/31/soil-testing-procedure-and-know-more-about-soil-teating/
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅತಿ ಕಡಿಮೆ ಬಡ್ಡಿ ದರದಲ್ಲಿ ಲೋನ್ ವಿತರಣೆ https://krushivichara.com/index.php/2024/05/28/kisan-credit-card-uses-how-to-apply-this-online-know-full-derails/
ಮಣ್ಣೂ ರಹಿತ ಕೃಷಿ ಪದ್ಧತಿ (hydrophonics ) ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ https://krushivichara.com/index.php/2024/05/28/hydrophonics-grow-plants-without-soil-and-earn-more-income/
ಬೆಳೆ ಪರಿಹಾರ ಪೇಮೆಂಟ್ ಲಿಸ್ಟ್ : ನಿಮ್ಮ ಖಾತೆಗೆ ಹಣ ಜಮಾ ಆಗಿದ್ದೀಯಾ ಇಲ್ಲವಾ ತಿಳಿಯಿರಿ https://krushivichara.com/index.php/2024/05/27/bele-parihara-payment-status-has-been-updated-please-check-your-status/
ಪಿಎಂ ಮುದ್ರಾ ಲೋನ್ : ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/04/02/pm-mudra-loan-scheme-for-all-farm-and-non-farm-activities/